ಲೀಲಾವತಿ ಬೆಡ್ ನಲ್ಲಿ ಕೂತು ಬ್ರೆಡ್ ತಿಂದ ಕಟ್ಟಾ

ವಿಕ್ಟೋರಿಯಾ ಆಸ್ಪತ್ರೆ ವೈದ್ಯಾಧಿಕಾರಿ ಕಾಂತರಾಜು ಅವರ ಶಿಫಾರಸ್ಸು ಹಾಗೂ ಕೋರ್ಟ್ ಆದೇಶ ತಲುಪಿದ ನಂತರ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಮುಂಬೈಗೆ ತೆರಳಲು ಅನುಮತಿ ನೀಡಲಾಯಿತು ಎಂದು ಪರಪ್ಪನ ಅಗ್ರಹಾರ ಜೈಲಾಧಿಕಾರಿ ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.
ಜಾಮೀನು ಅರ್ಜಿ ಕಥೆ: ಸದ್ಯಕ್ಕೆ ಲೀಲಾವತಿ ಆಸ್ಪತ್ರೆಯಲ್ಲಿರುವ ಕಟ್ಟಾ ನಾಯ್ಡು ಅವರ ಜೊತೆ ಅವರ ಕುಟುಂಬ ಸದಸ್ಯರು ಇದ್ದಾರೆ. ಎಂಥಾ ಕೆಟ್ಟ ಕಾಯಿಲೆ ಬಂದಿದೆ ಎಂದರೂ ಕನಿಕರ ತೋರದ ಹೈಕೋರ್ಟ್ ಮೇಲೆ ಕುಟುಂಬ ಸದಸ್ಯರು ಬೇಸರ ವ್ಯಕ್ತಪಡಿಸಿದರು.
ಸಿಎಆರ್ ಪೊಲೀಸರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಟ್ಟಾ ಅವರಿಗೆ ಜಾಮೀನು ಸಿಕ್ಕೇ ಸಿಗುತ್ತೆ ಎಂಬ ಭರವಸೆ ಕಟ್ಟಾ ಕುಟುಂಬಕ್ಕಿದೆ.
ಈ ನಡುವೆ ಲೋಕಾಯುಕ್ತ ಕೋರ್ಟ್ ನಲ್ಲಿ ಕಟ್ಟಾ ಅವರು ಆರೋಪಿಯಾಗಿರುಅ ಕೆಐಎಡಿಬಿ ಪ್ರಕರಣದ ವಿಚಾರಣೆ ನವೆಂಬರ್ ಮೊದಲ ವಾರಕ್ಕೆ ಮುಂದೂಡಲ್ಪಟ್ಟಿದೆ.












Click it and Unblock the Notifications