ಮೆಟ್ರೋ ಚಾಲನೆ: ಭಾರದ್ವಾಜ್ ಗೆ ಆಹ್ವಾನ ಏಕಿಲ್ಲ?

BMRCL controversy
ಬೆಂಗಳೂರು, ಅ.23: ಬಹುನಿರೀಕ್ಷಿತ ನಮ್ಮ ಮೆಟ್ರೋಗೆ ಅ.20ರಂದು ಚಾಲನೆ ನೀಡಿದ ಕರ್ನಾಟಕ ಸರ್ಕಾರ ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ ಸಾಂವಿಧಾನಿಕ ಪ್ರತಿನಿಧಿಯಾದ ರಾಜ್ಯಪಾಲರನ್ನೇ ಆಹ್ವಾನಿಸದೇ ಹೊಸ ವಿವಾದಕ್ಕೆ ಕಾರಣವಾಗಿದೆ.

ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರನ್ನು ಹಾಡಿಹೊಗಳಿದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ತಮ್ಮ ಸರ್ಕಾರ ಎಸೆಗಿರುವ ಲೋಪದ ಬಗ್ಗೆ ಅರಿವಿದ್ದಂತೆ ತೋರಲಿಲ್ಲ.

ಯಡಿಯೂರಪ್ಪ ಅವರ ಕಾಲದಿಂದಲೂ ಬಿಜೆಪಿ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಬಂಧ ಸೌಹಾರ್ದಯುತವಾಗಿಲ್ಲ. ಮಾಜಿ ಮುಖ್ಯಮಂತ್ರಿ ಸದಾ ರಾಜ್ಯಪಾಲರೊಡನೆ ಸಂಘರ್ಷ ಮುಂದುವರೆದಿದೆ.

ಆದರೂ, ಆರೆಸ್ಸೆಸ್ ಸಿದ್ಧಾಂತದ ಮೇಲೆ ಬೆಳೆದ ಸದಾನಂದ ಗೌಡರಿಂದ ಈ ರೀತಿ ಶಿಷ್ಟಾಚಾರ ಉಲ್ಲಂಘನೆಯಾಗಿರುವುದು ಟೀಕೆಗೆ ಗುರಿಯಾಗಿದೆ.

ರಾಜ್ಯಪಾಲರಿಗೆ ಅಪಮಾನ: 2010ರ ಜಾಗತಿಕ ಬಂಡವಾಳ ಸಮಾವೇಶದ ಸಂದರ್ಭದಲ್ಲೂ ರಾಜ್ಯಪಾಲರನ್ನು ಕಡೆಗಣಿಸಲಾಗಿತ್ತು. ಮೆಟ್ರೋ ಉದ್ಘಾಟನೆ ಆಹ್ವಾನ ಪತ್ರಿಕೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರಿಗೆ ತಲುಪಿಲ್ಲ. ಈ ಬಗ್ಗೆ ಯಾವ ಸಚಿವರೂ ನಮ್ಮನ್ನು ಕೇಳಿಲ್ಲ ಎಂದು ರಾಜಭವನದ ಕಚೇರಿ ಮೂಲಗಳು ಹೇಳಿದೆ.

ಸರ್ಕಾರದ ಜಾಣ ಉತ್ತರ: ಕೇಂದ್ರ ಸಚಿವರು ಉದ್ಘಾಟಿಸುವ ಸಮಾರಂಭಕ್ಕೆ ರಾಜ್ಯಪಾಲರು ಅಧ್ಯಕ್ಷತೆ ವಹಿಸುವಂತಿಲ್ಲ ಹಾಗಾಗಿ ಅವರನ್ನು ಆಹ್ವಾನಿಸಲಿಲ್ಲ ಎಂದು ಸರ್ಕಾರಿ ಮೂಲಗಳು ಹೇಳುತ್ತವೆ.

ಮೆಟ್ರೋ ಮ್ಯಾನ್ ಎಲ್ಲಿ: ದೇಶದಲ್ಲಿ ಮೆಟ್ರೋ ರೈಲು ಸಂಚಾರದ ಜನಕ, ಬೆಂಗಳೂರು ರೈಲಿನ ನಿರೂಪಕ, ಕೊಂಕಣ ರೈಲು ಯೋಜನೆಯ ಯಶಸ್ವಿ ಸಾಧಕ 'ಮೆಟ್ರೋ ಮ್ಯಾನ್ ' ಎಂದು ಖ್ಯಾತಿ ಆಗಿರುವ ಶ್ರೀಧರನ್ ಅವರನ್ನು ಆಹ್ವಾನಿಸುವ ಕಷ್ಟವನ್ನು ಕರ್ನಾಟಕ ಸರ್ಕಾರವಾಗಲಿ, ಬಿಎಂಆರ್ ಸಿಎಲ್ ಸಂಸ್ಥೆಯಾಗಲಿ ತೆಗೆದುಕೊಂಡಿಲ್ಲ ಎಂಬುದು ದುರಂತವೇ ಸರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+