ಅವು ನನವಲ್ಲ, ದಾಳಿ ಮಾಡಿದ ಪೊಲೀಸರೇ ತಂದು ನನ್ನ ಮನೆಯಲ್ಲಿಟ್ಟರು

jayalalithaa-disowns-disproportionate-assets-cbi-court
ಬೆಂಗಳೂರು, ಅ.22: ಕನ್ನಡದ ಪ್ರತಿಭಾವಂತ ನಟ ಉಪೇಂದ್ರ ಅವರು ತಮ್ಮ ಚಿತ್ರವೊಂದರ ಕೋರ್ಟ್ ದೃಶ್ಯವೊಂದರಲ್ಲಿ ಕಟಕಟೆಯಲ್ಲಿ ನಿಂತು 'ಬುದ್ದಿವಂತ'ನಾಗಿ ತಮ್ಮ ಅಪರಾಧಗಳನ್ನು ಮುಚ್ಚಿಕೊಳ್ಳುವ ಪ್ರಯತ್ನವಾಗಿ 'ನಾನವನಲ್ಲ, ನಾನವನಲ್ಲ' ಎಂದು ನ್ಯಾಯಾಧೀಶಯರೆದುರು ಅಂಗಾಲಾಚುತ್ತಾರೆ.

ಅದೇ ಮಾದರಿಯಲ್ಲಿ ಪರಪ್ಪನ ಅಗ್ರಹಾರದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನಯ್ಯ ಅವರು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಮೇಲೆ ಪ್ರಶ್ನೆಗಳ ಸುರಿಮಳೆಗರೆದಾಗ 'ಅವು ನನ್ನದಲ್ಲ. ಎಲ್ಲ ಸೀರೆಗಳು ಮತ್ತು ಚಪ್ಪಲಿಗಳು ನನ್ನದಲ್ಲ' ಎಂದು ಜಯಾ ನ್ಯಾಯಾಲಯಕ್ಕೆ ತಿಳಿಸಿದರು.

'2008ರ ಆಗಸ್ಟ್‌ನಲ್ಲಿ ತಮ್ಮ ನಿವಾಸದಲ್ಲಿ ವಶಪಡಿಸಿಕೊಳ್ಳಲಾದ ಸಾವಿರಾರು ಸೀರೆಗಳು, ಬಂಗಾರದ ಒಡವೆಗಳು ಮತ್ತು ಬೆಳ್ಳಿಯ ಸಾಮಗ್ರಿಗಳ ಬಗ್ಗೆ ಏನು ಹೇಳುತ್ತೀರಿ ಎಂದು ನ್ಯಾಯಾಲಯ ಪ್ರಶ್ನಿಸಿತು. ಅದಕ್ಕೆ ಆಕೆ 'ಅಸಲಿಗೆ ಅವು ನನ್ನದಲ್ಲವೇ ಅಲ್ಲ' ಎಂದು ಕ್ಲುಪ್ತವಾಗಿ ಉತ್ತರಿಸಿ, ಜಾರಿಕೊಂಡರು.

'ಪೊಲೀಸರು ದಾಳಿಯ ವೇಳೆ ಕೆಲವು ಬೆಳ್ಳಿಯ ಸಾಮಗ್ರಿಗಳನ್ನು ತಂದಿಟ್ಟು ಅವು ನನ್ನದೆಂದು ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ನಾನು ಕೇವಲ ಒಂದು ರೂಪಾಯಿ ಸಂಬಳ ಪಡೆಯುತ್ತಿದ್ದದ್ದು ನಿಜ. ಶಶಿಕಲಾ, ಸುಧಾಕರನ್ ಮತ್ತು ಇಳವರಸಿ ಅವರ ಮಾಲೀಕತ್ವದ ಕಂಪನಿಗಳಲ್ಲಿ ನಾನು ಪಾಲುದಾರಳಾಗಿದ್ದೆ ಅಷ್ಟೆ' ಎಂದೂ ಅವರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದರು ಎಂದು ಆಚಾರ್ಯ ತಿಳಿಸಿದರು.

'ಬಂಗಾರದ ಒಡವೆಗಳು ನನ್ನದಾದರೂ ಅವುಗಳನ್ನು ನಾನು ಮುಖ್ಯಮಂತ್ರಿ ಆಗುವ ಮೊದಲೇ ಸಂಪಾದಿಸಿದ್ದೆ. ಹಳೆಯ ಒಡವೆಗಳ ಬಂಗಾರವನ್ನೇ ಬಳಸಿ ಹೊಸ ಒಡವೆಗಳನ್ನೂ ಮಾಡಿಸಿಕೊಂಡಿದ್ದೆ' ಎಂದೂ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ. ನ. 8ರಂದು ಜಯಲಲಿತಾ ವಿಚಾರಣೆ ಮುಂದುವರಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+