ಕಾಲುವೆಯಲ್ಲಿ ಕಾರು ಬಿದ್ದು ಐವರ ದುರ್ಮರಣ

ಮೇದಕ್‌ನಿಂದ ಮೈಸೂರಿಗೆ ಹೊರಟಿದ್ದರೆನ್ನಲಾದ ಒಂದೇ ಕುಟುಂಬದ ಇವರು ಪ್ರಯಾಣಿಸುತ್ತಿದ್ದ ಟಾಟಾ ಇಂಡಿಗೋ ಕಾರು ನಸುಕಿನ ಜಾವ ಇಲ್ಲಿನ ಕಾಲುವೆಗೆ ನೇರವಾಗಿ ನುಗ್ಗಿದೆ. ಚಾಲಕ ನಿದ್ದೆ ಮಂಪರಿನಲ್ಲಿದ್ದ ಎನ್ನಲಾಗಿದೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯುವತಿಯೊಬ್ಬಳು ಶಹಾಪೂರ್ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಳಾಗಿದ್ದಾಳೆ.
ಮೃತಪಟ್ಟವರನ್ನು ರಾಮರಾವ್ (50), ಪ್ರಕಾಶ್‌ರಾವ್ (45), ಲಲಿತಾ (35) ಹಾಗೂ ಜ್ಯೋತಿ (18) ಎಂದು ಗುರುತಿಸಲಾಗಿದ್ದು, ಮೃತಪಟ್ಟ ಮತ್ತೋರ್ವ ವ್ಯಕ್ತಿಯನ್ನು ಗುರುತಿಸಲಾಗಿಲ್ಲ. ಈತ ಚಾಲಕ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಇದಾಗಿದ್ದು, ಅಪಘಾತ ಸ್ಥಳದಲ್ಲಿ ಸಾಕಷ್ಟು ಜನ ಜಮಾಯಿಸಿದ್ದರು. ಗುಲ್ಬರ್ಗ ಐಜಿಪಿ ಡಾ. ವಜೀದ್ ಅಹಮದ್ ಹಾಗೂ ಶಾಸಕ ಶರಣಬಸಪ್ಪ ದರ್ಶನಾಪೂರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಭೀಮರಾಯನಗುಡಿ ಸಿಪಿಐ ನ್ಯಾಮಗೌಡರ್, ಪಿಎಸೈ ದೌಲತ್ ಮತ್ತು ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದರು. ಮೃತರ ವಾರಸುದಾರರುಗಳಿಗೆ ಮಾಹಿತಿ ರವಾನಿಸಲಾಗಿದೆ.











Click it and Unblock the Notifications