ಸಚಿವ ಆರ್ ಅಶೋಕ್ ರಾಜೀನಾಮೆಗೆ ಕ್ಷಣಗಣನೆ!

R Ashok resignation demanded
ಬೆಂಗಳೂರು, ಅ.20: ಗೃಹ ಸಚಿವರ ಮೇಲೆ ತನಿಖೆಗೆ ಆದೇಶ ಹೊರಬಿದ್ದಿರುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ ಆರ್ ಅಶೋಕ್ ಅವರು ರಾಜೀನಾಮೆ ನೀಡಬೇಕು. ನಾವು ಅಶೋಕ್ ಅವರ ರಾಜೀನಾಮೆಗೆ ಕ್ಷಣಗಣನೆಯಲ್ಲಿದ್ದೇವೆ ಎನ್ನುತ್ತಿದ್ದಾರೆ ವಿಪಕ್ಷ ನಾಯಕರು.

ಅಶೋಕ್ ಅವರು ಪ್ರಭಾವಿ ನಾಯಕರಾಗಿರುವುದರಿಂದ ತಮ್ಮ ವಿರುದ್ಧ ದೂರು ಸಲ್ಲಿಸಿರುವ ವ್ಯಕ್ತಿಯ ಮೇಲೆ ದೂರು ವಾಪಾಸ್ ಪಡೆಯುವಂತೆ ಒತ್ತಡ ಹೇರಬಹುದು.

ಅಲ್ಲದೆ, ಪೊಲೀಸ್ ಇಲಾಖೆ ಕೂಡಾ ಗೃಹ ಇಲಾಖೆಯ ಅಧೀನದಲ್ಲಿ ಬರುವುದರಿಂದ ಅಶೋಕ್ ಅವರು ತಮ್ಮ ಪ್ರಭಾವ ಬೀರುವ ಸಾಧ್ಯತೆಯಿರುತ್ತದೆ.

ಹೀಗಾಗಿ ಅವರು ಕೂಡಲೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಮೋಟಮ್ಮ, ಆರ್ ವಿ ದೇಶಪಾಂಡೆ ಅವರು ಆಗ್ರಹಿಸಿದ್ದಾರೆ.

ನೆನಪಿರಲಿ ಇದು ಎರಡನೇ ಬಾರಿ: ಅಶೋಕ್ ಅವರ ವಿರುದ್ಧ ಇದು ಎರಡನೇ ಬಾರಿ ದೂರು ದಾಖಲಾಗುತ್ತಿರುವುದು. ಆದರೆ, ಮೊದಲ ದೂರನ್ನು ಮುಚ್ಚಿಹಾಕಲಾಗಿದೆ.

ಈ ಬಾರಿ ತನಿಖೆ ನಡೆಯುತ್ತಿರುವುದು ಸ್ವಾಗತಾರ್ಹ. ಅಶೋಕ್ ನೈತಿಕ ಹೊಣೆ ಹೊತ್ತು ಕೆಳಗಿಳಿಯಬೇಕು ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.

ಆದರೆ, ಅಶೋಕ್ ವಿರುದ್ಧ ತನಿಖೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ಅವರು, 'ಈ ಬಗ್ಗೆ ನಾವು(ಜೆಡಿಎಸ್) ಈ ಮುಂಚೆಯೇ ಹೇಳಿದ್ದವು. ಅದರೆ, ಈ ಸಮಯದಲ್ಲಿ ನಾನು ಅಶೋಕ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುವುದಿಲ್ಲ.

ಆದರೆ, ಲೋಕಾಯುಕ್ತ ಪೊಲೀಸರು ಅಶೋಕ್ ಅವರ ವಿರುದ್ಧ ದೋಷಾರೋಪಣ ಪಟ್ಟಿ ತಯಾರಿಸಿ FIR ದಾಖಲಿಸಿದರೆ ಅಗ ಅಶೋಕ್ ಅವರು ಗೃಹ ಸಚಿವ ಸ್ಥಾನದಲ್ಲಿ ಕುಳಿತುಕೊಳ್ಳಲು ಅರ್ಹರಾಗಿರುವುದಿಲ್ಲ.

ರಾಜೀನಾಮೆ ಕೊಟ್ಟು ತನಿಖೆಗೆ ಸಂಪೂರ್ಣವಾಗಿ ಸಹಕರಿಸಬೇಕಾಗುತ್ತದೆ ಎಂದು ದತ್ತಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+