ಬಿಎಸ್ ವೈ ಪುತ್ರರಿಗೆ ರಿಲೀಫ್, ಅ.21ಕ್ಕೆ ಯಡ್ಡಿ ಭವಿಷ್ಯ

ಷರತ್ತಿನಿಂದ ಎರಡು ವಾರಗಳ ಕಾಲ ವಿನಾಯತಿ ನೀಡಲಾಗಿದೆ. ಜಾಮೀನು ಸಂಬಂಧಿಸಿದ ಕೆಲ ಷರತ್ತುಗಳಿಗೆ ತಡೆ ನೀಡಿ ಹೈಕೋರ್ಟ್ ಆದೇಶ ನೀಡಿದೆ. ಮೂರು ವರ್ಷಗಳ ಕಾಲಾವಧಿಯ ಬ್ಯಾಂಕ್ ಖಾತೆ ವಿವರ ಸಲ್ಲಿಕೆಗೆ ಭಾಗಶಃ ತಡೆ ಸಿಕ್ಕಿದೆ.
ಯಡ್ಡಿಗೆ ಇಲ್ಲ ರಿಲೀಫ್ : ಇದಕ್ಕೂ ಹೈಕೋರ್ಟ್ ನಲ್ಲಿ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ಮುಂದುವರೆದಿದ್ದು, ಯಡಿಯೂರಪ್ಪ ಅವರ ಪರ ಹಿರಿಯ ವಕೀಲ ಉದಯ್ ಲಲಿತ್ ಅವರು ವಾದ ಮಂಡಿಸಿದ್ದಾರೆ. ಸಿರಾಜಿನ್ ಬಾಷಾ ವಿರುದ್ಧ ಸಿಎಚ್ ಹನುಮಂತರಾಯ ಅವರು ವಾದಿಸುತ್ತಿದ್ದಾರೆ.
ಯಡಿಯೂರಪ್ಪ ವಕೀಲರ ವಾದ ಬಾಕಿಯಿದ್ದು, ವಿಚಾರಣೆಯನ್ನು ನಾಳೆ(ಅ.21)ಗೆ ನ್ಯಾ. ಪಿಂಟೋ ಅವರು ಮುಂದೂಡಿ ಆದೇಶಿಸಿದ್ದಾರೆ.
ಯಡಿಯೂರಪ್ಪ ಅವರು ಜೈಲಿನಲ್ಲಿ ಎಂದಿನಂತೆ ಕಾಲಕಳೆದಿದ್ದು, ಆಸ್ಪತ್ರೆಗೆ ಹೋಗದೆ ಮುಷ್ಕರ ಹೂಡಿದ್ದಾರೆ. ಇವತ್ತು ಜೈಲಿನ ದಿನಚರಿ ಹೇಗಿತ್ತು ನೋಡೋಣ...












Click it and Unblock the Notifications