ತೆಲಂಗಾಣ ಪ್ರತ್ಯೇಕ ರಾಜ್ಯ ಅಸ್ತಿತ್ವಕ್ಕೆ ಬರಲಿ: ಅಡ್ವಾಣಿ

ಉತ್ತರಾಖಂಡ ಮತ್ತು ಛತ್ತೀಸ್‌ಗಡನಿಂದ ಜಾರ್ಕಂಡ್‌ನ್ನು ಇಬ್ಬರು ಮುಖ್ಯಮಂತ್ರಿಗಳು ಸೇರಿ ಪ್ರತ್ಯೇಕ ರಾಜ್ಯ ಮಾಡಿದರು. ಇದನ್ನು ಸಾರ್ವಜನಿಕರು ವಿರೋಧಿಸಿದರೂ ಪ್ರತ್ಯೇಕ ರಾಜ್ಯವೆಂದು ಮಾನ್ಯ ಮಾಡಲಾಯಿತು. ಇದನ್ನು ಉಲ್ಲೇಖಿಸಿ ತೆಲಂಗಾಣವನ್ನು ರಚಿಸಬೇಕು. ಕೇಂದ್ರ ಸರಕಾರ ಮತ್ತು ಸಂಸತ್ತು ಹೊಸ ರಾಜ್ಯಗಳ ರಚನೆಯನ್ನು ಪರಿಚ್ಛೇದ 3ರ ಅಡಿಯಲ್ಲಿ ರೂಪಿಸಲಿ ಎಂದು ಎನ್‌ಡಿಎ ಸರಕಾರಕ್ಕೆ ಸಲಹೆಯನ್ನು ನೀಡಿತ್ತು ಎಂದು ಅಡ್ವಾಣಿ ಹೇಳಿದರು.
ಆದರೆ ತೆಲಂಗಾಣ ರಾಜ್ಯದ ವಿಚಾರದಲ್ಲಿ ಯುಪಿಎ ಸರಕಾರ ದಿಟ್ಟ ನಿರ್ಧಾರ ಕೈಗೊಳ್ಳುವಲ್ಲಿ ದೂರವಿದ್ದು, ಹೊಸ ವರ್ಷದೊಳಗೆ ಅದನ್ನು ವಾಸ್ತವಗೊಳಿಸಲು ಮುಂದಾಗಬೇಕು ಎಂದು ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಆಗ್ರಹಿಸಿದ್ದಾರೆ.
ತೆಲಂಗಾಣ ರಾಜ್ಯ ರಚನೆಗೆ ಯಾವ ಕೂಟದ ವಿಶ್ಲೇಷಣೆಯ ಅಗತ್ಯವೂ ಇಲ್ಲ ಎಂದು ಚಳಿಗಾಲ ಅಧಿವೇಶನದಲ್ಲಿ ಪ್ರತಿಪಾದಿಸುವುದಾಗಿ ಹೇಳಿದ ಅವರು, ಭಾರತದ ಸಂವಿಧಾನದಲ್ಲಿ ಪ್ರತ್ಯೇಕ ರಾಜ್ಯ ರಚನೆಗೆ ಅವಕಾಶವಿದ್ದರೂ ಇದುವರೆಗೂ ವಿಧಾನ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದಿರುವುದು ಆಶ್ಚರ್ಯತಂದಿದೆ ಎಂದರು.
ಈ ವಿಚಾರದಲ್ಲಿ ಯುಪಿಎ ಸರಕಾರ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂದಿನ ಎರಡು ವರ್ಷಗಳಲ್ಲಿ ಆಂಧ್ರಪ್ರದೇಶದ ಪರಿಸ್ಥಿತಿ ಚಿಂತಾಜನಕವಾಗಲಿದ್ದು, ಇದಕ್ಕೆ ಯುಪಿಎ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದರು. ಸರಕಾರವು ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗೆ ಸಂಬಂಧಿಸಿದಂತೆ ಇನ್ನು 15 ದಿನಗಳಲ್ಲಿ ಒಂದು ನಿರ್ಧಾರಕ್ಕೆ ಬರಲಿದೆ ಎಂದು ಗೃಹ ಸಚಿವರು ಹೇಳಿದ್ದರು. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಅವರ ಹೇಳಿಕೆಗಳು ನಿರಾಧಾರವಾದವುಗಳು ಎಂದು ಅನ್ನಿಸುತ್ತಿದೆ












Click it and Unblock the Notifications