ಮಾಜಿ ಸಿಎಂ ಯಡಿಯೂರಪ್ಪ ಬಂಧನಕ್ಕೆ ಕ್ಷಣಗಣನೆ

Countdown starts for BSY arrest
ಬೆಂಗಳೂರು, ಅ.15: ಈಗ ಎಲ್ಲರ ಕಣ್ಣು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಬೆಂಗಳೂರು ರೇಸ್‌ಕೋರ್ಸ್ ನಿವಾಸದತ್ತ ನೆಟ್ಟಿದೆ. ಯಡಿಯೂರಪ್ಪ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಮಾಧ್ಯಮಗಳು ಪ್ರತಿನಿಧಿಗಳು ನೇರವರದಿ ಬಿತ್ತರಿಸಲು ಕಾತುರದಿಂದ ಕಾದುಕುಳಿತಿದ್ದಾರೆ.

ಶನಿವಾರ (ಅ.15) ಸಂಜೆ 4ಗಂಟೆಯೊಳಗೆ ಯಡಿಯೂರಪ್ಪ ಅವರನ್ನು ಬಂಧಿಸುವ ಸಾಧ್ಯತೆಗಳಿತ್ತು. ಆದರೆ ಲೋಕಾಯುಕ್ತ ಪೊಲೀಸರು ಬಿಎಸ್‌ವೈ ಅವರನ್ನು ಬಂಧಿಸಲು ರೇಸ್‌ಕೋರ್ಸ್ ನಿವಾಸದತ್ತ ತೆರಳಿದ್ದಾರೆ. ಅವರ ಬಂಧನ ಬಹುತೇಕ ಖಚಿತವಾಗಿದೆ.

ಈಗಾಗಲೆ ಮಾಜಿ ಸಚಿವ ಎಸ್ ಎನ್ ಕೃಷ್ಣಯ್ಯಶೆಟ್ಟಿ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಅಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಗಿದೆ. ತೀರ್ಪಿಗೂ ಮುನ್ನವೇ ಅವರ ಕೃಷ್ಣಯ್ಯಶೆಟ್ಟಿ ಅವರ ಜಂಘಾಬಲವೇ ಉಡುಗಿ ಹೋಗಿತ್ತು.

ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ನ್ಯಾಯಾಧೀಶ ಎನ್ ಕೆ ಸುಧೀಂದ್ರರಾವ್ ತೀರ್ಪು ಪ್ರಕಟಿಸುತ್ತಿದ್ದಂತೆ ಶೆಟ್ಟಿ ಅವರ ಕಾಲುಗಳು ನಿತ್ರಾಣವಾಗಿ ಕುಸಿದು ಬಿದ್ದಿದ್ದರು. ಅವರಿಗೆ ಲೋ ಬಿಪಿ ಇತ್ತು ಎನ್ನಲಾಗಿದೆ. ಯಡಿಯೂರಪ್ಪ ಅವರ ಪರಿಸ್ಥಿತಿ ಕೂಡ ಇದಕ್ಕಿಂತಲೂ ಭಿನ್ನವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+