ಮಾಜಿ ಸಿಎಂ ತವರು ಜಿಲ್ಲೆಯಲ್ಲಿ ಹಬ್ಬ ಆಚರಿಸಿದ ಕಾಂಗ್ರೆಸ್
ಬೆಂಗಳೂರು,
ಅ.15: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಇಂದು (ಅ.15) ಹಬ್ಬದ ಸಂಭ್ರಮ! ಈ ಹಬ್ಬವನ್ನು ಆಚರಿಸಿಕೊಂಡು ಸಂಭ್ರಮಿಸಿದವರು ಕಾಂಗ್ರೆಸ್ ಮುಖಂಡರು. id="toptextpromo">ಡಿನೋಟಿಫಿಕೇಷನ್
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ವಜಾಗೊಳಿಸಿ ಬಂಧನಕ್ಕೆ ಆದೇಶಿಸಿದ ಸುದ್ದಿ ಮುಟ್ಟುತ್ತಿದ್ದಂತೆ ಶಿವಮೊಗ್ಗದ ಸಮಾವೇಶದಲ್ಲಿದ್ದ ಕಾಂಗ್ರೆಸ್ ಮುಖಂಡರು ಸಂಭ್ರಮ ಆಚರಿಸಿಕೊಂಡರು. id='are-slot-1' class='oiad oi-axt oiadv'> id='top-searched-articles'>ಕೆಪಿಸಿಸಿ
ಅಧ್ಯಕ್ಷ ಜಿ ಪರಮೇಶ್ವರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮೋಟಮ್ಮ ಹಾಗೂ ಕುಮಾರ ಬಂಗಾರಪ್ಪ ಅವರು ಕೈಗಳನ್ನು ಎತ್ತಿ ಜೈಕಾರ ಕೂಗಿದರು. ಇದು ನ್ಯಾಯಕ್ಕೆ ಸಂದ ಜಯ. ತುಂಬಾ ಸಂತಸಪಡುವ ವಿಚಾರವಿದು. ಯಡಿಯೂರಪ್ಪ ಅವರನ್ನು ಹೀಗೇ ಬಿಟ್ಟಿದ್ದರೆ ಅವರು ಇನ್ನೂ ಏನೇನು ಭ್ರಷ್ಟಾಚಾರಗಳಲ್ಲಿ ತೊಡಗಿಕೊಳ್ಳುತ್ತಿದ್ದರೋ ಎಂಬ ಪ್ರತಿಕ್ರಿಯೆ ಕೈ ಪಾಳಯದಿಂದ ವ್ಯಕ್ತವಾಗಿದೆ.











Click it and Unblock the Notifications