ತ್ಯಾಗಜೀವಿ ಶಂಕರಪ್ಪ ಸಿಎಂಗಾಗಿ ಪಟ್ಟ ಬಿಟ್ಟನಪ್ಪ

ಯಡಿಯೂರಪ್ಪ ಅವರ ವಿರೋಧದ ನಡುವೆಯೂ ರಾಯಚೂರಿನಿಂದ ಬೆಂಗಳೂರಿಗೆ ಹಾರಿ ಬಂದ ಎಂಎಲ್ ಸಿ ಶಂಕರಪ್ಪ ಅವರು ಶುಕ್ರವಾರ ಮಧ್ಯಾಹ್ನ ತಮ್ಮ ರಾಜೀನಾಮೆ ಪತ್ರವನ್ನು ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರ ಮೂರ್ತಿ ಅವರಿಗೆ ನೀಡಿದರು.
ಪಕ್ಷದ ಹಿರಿಯ ನಾಯಕರ ನಿರ್ಧಾರ ಹಾಗೂ ಸಿಎಂಗೆ ಸ್ಥಾನ ಕಲ್ಪಿಸಿಕೊಡುವ ಉದ್ದೇಶದಿಂದ ರಾಜೀನಾಮೆ ನೀಡಿದ್ದೇನೆ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ ಎಂದು ಶಂಕರಪ್ಪ ಅವರು ಹೇಳಿದ್ದಾರೆ.
ಹಿಂದುಳಿದ ಆಯೋಗಕ್ಕೆ ಅಧ್ಯಕ್ಷ ದೊರಕುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ ನಿಜ. ಪಕ್ಷ ನನಗೆ ಯಾವ ಸ್ಥಾನ ನೀಡುತ್ತದೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ, ನಿಷ್ಠೆಯಿಂದ ನನ್ನ ಕರ್ತವ್ಯ ನಿಭಾಯಿಸುತ್ತೇನೆ ಎಂದು ಶಂಕರಪ್ಪ ಹೇಳಿದರು. ಅಲ್ಲಿ ಎಲ್ಲೂ ಯಡಿಯೂರಪ್ಪ ಬೆಂಬಲಿಗರ ಸುಳಿವಿರಲಿಲ್ಲ.












Click it and Unblock the Notifications