ರೋಡ್ ಕಿಂಗ್ ಖೇಣಿಯಿಂದ ಹೊಸ ಪಕ್ಷ

ಬಿಎಂಐಸಿ ನೈಸ್ ಕಾರಿಡಾರ್ ಯೋಜನೆಯ ಹೊಣೆ ಹೊತ್ತಿರುವ ಖೇಣಿ ತಮಗೆ ರಾಜಕೀಯ ಪ್ರವೇಶಿಸಲು ಯಾವುದೇ ಅಡ್ಡಿಯಿಲ್ಲ, ಶೀಘ್ರದಲ್ಲೇ ಹೊಸ ಪಕ್ಷವೊಂದನ್ನು ಘೋಷಿಸುವುದಾಗಿ ಹೇಳಿದ್ದಾರೆ.
ಬಹುಶಃ ಇನ್ನೊಂದು ವಾರದಲ್ಲಿ ಈ ನಿರ್ಧಾರ ಹೊರಬೀಳಬಹುದು. ಕರ್ನಾಟಕ ಮಕ್ಕಳ ಪಕ್ಷ ಎಂಬ ಹೆಸರಿನ ಖೇಣಿಯವರ ಹೊಸ ಪಕ್ಷವನ್ನು ಖೇಣಿ ಅಭಿಮಾನಿ ಸಂಘದ ಪದಾಧಿಕಾರಿಯೊಬ್ಬರು ಸ್ಥಾಪಿಸುತ್ತಿರುವುದಾಗಿ ಖೇಣಿ ಹೇಳಿದ್ದಾರೆ.
"ಈಗ ನಡೆಯುತ್ತಿರುವ ಅರಾಜಕತೆಯನ್ನು ನನ್ನಿಂದ ನೋಡಲಾಗುತ್ತಿಲ್ಲ. ಹಾಗಾಗಿ ವಾತಾವರಣವನ್ನು ಉತ್ತಮ ರೀತಿಯಲ್ಲಿ ಬದಲಾಯಿಸಲು ಈ ನಿರ್ಧಾರಕ್ಕೆ ಬಂದಿದ್ದೇನೆ. ಸೂಕ್ತ ಸಮಯದಲ್ಲಿ ನನ್ನ ನಿರ್ಣಯ ತಿಳಿಸುತ್ತೇನೆ" ಎಂದು ಖೇಣಿ ಹೇಳಿದ್ದಾರೆ.












Click it and Unblock the Notifications