ಮಂಗಳೂರಲ್ಲಿ ಮಿಂಚು, ಸಿಡಿಲು ಸಹಿತ ಮುಸಲಧಾರೆ
ಮಂಗಳೂರು,
ಅ. 12 : ಮಂಗಳೂರು ಸುತ್ತಮುತ್ತಾ ಮಂಗಳವಾರ ರಾತ್ರಿ ಮಿಂಚು, ಗುಡುಗು ಸಹಿತ ಭಾರೀ ಮಳೆ ಸುರಿಯಿತು. ಸುಮಾರು ಮೂರು ಗಂಟೆಗಳ ಕಾಲ ನಿರಂತರವಾಗಿ ಸುರಿದ ಮುಸಲಧಾರೆಯಿಂದಾಗಿ ಜನಜೀವನ ಕೂಡ ಅಸ್ತವ್ಯಸ್ತಗೊಂಡಿತು. id="toptextpromo">ಮಳೆಗಿಂತಲೂ
ಮಿಂಚು ಮತ್ತು ಸಿಡಿಲಿನ ಅಬ್ಬರ ವಿಪರೀತವಾಗಿತ್ತು. ಮಳೆಗಾಲದಲ್ಲೂ ಕಾಣದ ಮಿಂಚು, ಸಿಡಿಲನ ಗರ್ಜನೆಯ ಅನುಭವ. ರಾತ್ರಿ ಹತ್ತು ಗಂಟೆಗೆ ಆರಂಭವಾದ ಮಳೆಯ ಆರ್ಭಟ ಮಧ್ಯರಾತ್ರಿ ಒಂದು ಗಂಟೆಗೆ ತಟಸ್ಥವಾಯಿತು. ಮಿಂಚು, ಗುಡುಗು ಆರಂಭವಾಗುತ್ತಿದ್ದಂತೆಯೇ ವಿದ್ಯುತ್ ಸ್ಥಗಿತಗೊಂಡಿತು. ಮತ್ತೆ ರಾತ್ರಿ ಒಂದೂವರೆ ಗಂಟೆಗೆ ವಿದ್ಯುತ್ ಪ್ರವಹಿಸಿತು. id='are-slot-1' class='oiad oi-axt oiadv'> id='top-searched-articles'>ಒಂದೆಡೆ
ಮಿಂಚು, ಸಿಡಿಲಿನಿಂದ ಜನ ಭಯಭೀತರಾದರೆ ಮತ್ತೊಂದೆಡೆ ಕತ್ತಲೆಯಲ್ಲಿ ಸೊಳ್ಳೆಗಳ ಭರ್ಜರಿ ಸಂಗೀತ ರಸಮಂಜರಿ. ಮಳೆ ಮತ್ತು ಸೊಳ್ಳೆಗಳ ಯುಗಳ ಗಾನವನ್ನು ಆನಂದಿಸುತ್ತ, ಶಪಿಸುತ್ತ ಜನತೆ ಕಾಲಕಳೆಯುವಂತಾಯಿತು. ಮಂಗಳವಾರ ಅಚಾನಕ್ಕಾಗಿ ಮಳೆ ಸುರಿದಿದ್ದರೂ ಬುಧವಾರ ಸೂರ್ಯ ಮತ್ತೆ ತನ್ನ ಚಮತ್ಕಾರ ತೋರಲಿದ್ದಾನೆ ಎಂದು ಹವಾಮಾನ ಇಲಾಖೆ ತಿಳಿಸಿದೆ.











Click it and Unblock the Notifications