ಜಂಬೂ ಸವಾರಿ ಯಶಸ್ವಿಗೊಳಿಸಿದ ಗಜಪಡೆಗೆ ಥ್ಯಾಂಕ್ಸ್

Elephants back to forest
ಮೈಸೂರು, ಅ. 9 : ಕಳೆದ ಎರಡು ತಿಂಗಳ ಹಿಂದೆ ಕಾಡಿನಿಂದ ಅರಮನೆ ನಗರಿಗೆ ಆಗಮಿಸಿದ್ದ ಬಲರಾಮ ನೇತೃತ್ವದ ಗಜಪಡೆ ಜಂಬೂ ಸವಾರಿಯನ್ನು ಯಶಸ್ವಿಯಾಗಿ ನೆರವೇರಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದ್ದವು. ಇಲ್ಲಿಯ ತನಕ ಪಟ್ಟಣದ ಬೆಡಗು ಭಿನ್ನಾಣ, ವಾಹನ, ಜನಗಳ ಕಿರಿಕಿರಿಯಲ್ಲಿ ಭೂರಿ ಬೋಜನ ಮಾಡುತ್ತಾ ದಿನಕಳೆಯುತ್ತಿದ್ದ ಗಜಪಡೆಗಳು ಭಾನುವಾರ ಬೆಳಿಗ್ಗೆ ಕಾಡಿನತ್ತ ಹೊರಟವು.

ಗುರುವಾರ ನಡೆದ ಜಂಬೂಸವಾರಿ ಬಳಿಕ ಆನೆಗಳಿಗೆ ಸಂಪೂರ್ಣ ವಿರಾಮ ನೀಡಲಾಗಿತ್ತು. ಶುಕ್ರವಾರ ಗಜಮಜ್ಜನದ ಮೂಲಕ ಮೈಮೇಲೆ ಬಿಡಿಸಲಾಗಿದ್ದ ಸುಂದರ ಚಿತ್ರಗಳನ್ನು ಅಳಿಸಲಾಯಿತು. ಬಳಿಕ ಮಾವುತರು ಅವುಗಳನ್ನು ಅರಮನೆ ಆವರಣದಲ್ಲಿ ಅಡ್ಡಾಡಿಸಿ ಹಸಿರು ಸೊಪ್ಪು ಹುಲ್ಲನ್ನು ನೀಡಿದ್ದರು.

ಶನಿವಾರ ಜಿಲ್ಲಾಡಳಿತದ ವತಿಯಿಂದ ಮಾವುತರು, ಕಾವಡಿಗಳು ಹಾಗೂ ಕುಟುಂಬದವರಿಗೆ ಔತಣ ಕೂಟವನ್ನು ಏರ್ಪಡಿಸಲಾಗಿತ್ತು. ತಿಂಗಳಾನುಗಟ್ಟಲೆ ಗಜಪಡೆಯ ಯೋಗಕ್ಷೇಮವನ್ನು ನೋಡಿಕೊಳ್ಳುವ ಮೂಲಕ ಯಶಸ್ವಿಯಾಗಿ ಜಂಬೂ ಸವಾರಿ ನಡೆಯುವಲ್ಲಿ ಕಾರಣಕರ್ತರಾದ ಮಾವುತರನ್ನು ಹಾಗೂ ಕುಟುಂಬವನ್ನು ಇದೇ ಸಂದರ್ಭ ಶ್ಲಾಘಿಸಲಾಯಿತು.

ಭಾನುವಾರ ಬೆಳಿಗ್ಗೆ ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿಯಿಂದ ಗಜಪಡೆ ಹಾಗೂ ಮಾವುತರ ಕುಟುಂಬವನ್ನು ಬೀಳ್ಕೊಡಲಾಯಿತು. ಈ ಸಂದರ್ಭ ಆನೆಗಳು ಲಾರಿಗಳಲ್ಲಿ ತಾವು ಬಂದಿದ್ದ ಆನೆಶಿಬಿರಕ್ಕೆ ತೆರಳಿದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+