ಯಡಿಯೂರಪ್ಪ ಕೋರ್ಟ್ ತೀರ್ಪು ನಂತರವೇ ಸಂಪುಟ ವಿಸ್ತರಣೆ
ಬೆಂಗಳೂರು.ಅ.8:
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ ವಾರ ಜೈಲುಪಾಲಾದರೆ ಹಾಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ. ಒಂದುವೇಳೆ, ಯಡಿಯೂರಪ್ಪಗೆ ಲೋಕಾಯುಕ್ತ ಕೋರ್ಟ್ ಜೀವದಾನ ನೀಡಿದರೆ ಡಿವಿಎಸ್ ಬೆಂಕಿಯಿಂದ ಬಾಣಲೆಗೆ ಬಿದ್ದಂತೆ ಸರ್ವಜ್ಞ ಎಂಬಂತಾಗಿದೆ ರಾಜ್ಯದ ಇಂದಿನ ಪರಿಸ್ಥಿತಿ. id="toptextpromo">ಹೌದು
ಇದು ಅಕ್ಷರಶಃ ಸತ್ಯ. ಅದಕ್ಕೆಂದೇ ಡಿವಿಎಸ್ ಸಂಪುಟ ವಿಸ್ತರಣೆಯನ್ನು ಸುಖಾಸುಮ್ಮನೆ ಮುಂದೂಡುತ್ತಾ ಬಂದಿದ್ದಾರೆ. ಹಾಗೆ ನೋಡಿದರೆ, ದಸರಾ ಮುಗಿಯುತ್ತಿದ್ದಂತೆ ನಿಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಸಚಿವ ಆಕಾಂಕ್ಷಿಗಳಿಗೆ (ಕನಿಷ್ಠ ನಾಲ್ಕು ಆಪ್ತ ಶಾಸಕರಿಗೆ) ಡಿವಿಎಸ್ ಹೇಳುತ್ತಾ ಬಂದಿದ್ದರು. ಆದರೆ ಯಡಿಯೂರಪ್ಪ ನೆರಳಿನಿಂದ ಇನ್ನೂ ಹೊರಬಾರದಿರುವುದರಿಂದ ಡಿವಿಎಸ್ ಗೆ ಯಡ್ಡಿ ಏನಾಗುತ್ತಾರೋ ಅಥವಾ ಏನನ್ನುತ್ತಾರೋ ಎಂಬ ಅತಂಕ ಹೆಚ್ಚಾಗಿದೆ. id='are-slot-1' class='oiad oi-axt oiadv'> id='top-searched-articles'>ಕೊಪ್ಪಳ
ಜನತಾ ನ್ಯಾಯಾಲಯದಲ್ಲಿ ಜಯಭೇರಿಯಾದ ಆತ್ಮವಿಶ್ವಾಸದಲ್ಲಿರುವ ಯಡಿಯೂರಪ್ಪ ಒಂದು ವೇಳೆ ಲೋಕಾಯುಕ್ತ ಕೋರ್ಟಿನಿಂದ ಬಚಾವಾದರೆ (ಸಾಧ್ಯತೆಗಳು ತೀರಾ ಕ್ಷೀಣ) ಡಿವಿಎಸ್ ಮೇಲೆ ತಮ್ಮ ಹಿಡಿತ ಬಿಗಿಗೊಳಿಸುವುದು ನಿಶ್ಚಿತ. ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ತಂದು ತಮಗೆ ಬೇಕಾದವರಿಗೆ ಸಂಪುಟದಲ್ಲಿ ಮಣೆ ಹಾಕಲಿದ್ದಾರೆ. ಇಲ್ಲವಾದಲ್ಲಿ ರಾಜ್ಯ ಬಿಜೆಪಿ ಮೇಲೆ ಯಡಿಯೂರಪ್ಪ ಹಿಡಿತ ತಂತಾನೇ ಸಡಿಲಗೊಳ್ಳಲಿದೆ.











Click it and Unblock the Notifications