ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ ಒಂದು ತಿಂಗಳು ಲೋಡ್ ಶೆಡ್ಡಿಂಗ್; ಸೋಮವಾರ ವೇಳಾಪಟ್ಟಿ ನಿಗದಿ: ಶೋಭಾ

By Srinath
|
Google Oneindia Kannada News

power-shortage-load-shedding-time-table-shobha
ಬೆಂಗಳೂರು.ಅ.8: ರಾಜ್ಯದಲ್ಲಿ ವಿದ್ಯುತ್ ಅಭಾವ ತೀವ್ರವಾಗಿದೆ. ಆದರೆ ಅಗತ್ಯ ಕಲ್ಲಿದ್ದಲು ಮತ್ತು ವಿದ್ಯುತ್ ಸರಬರಾಜು ಮಾಡದೆ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ನಾಡಿನ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ಈ ಹಿನ್ನೆಲೆಯಲ್ಲಿ, ಅಕ್ಟೋಬರ್ 14ರಂದು ದೆಹಲಿಗೆ ತೆರಳಿ ಕೇಂದ್ರ ಸಚಿವರಿಗೆ ವಿದ್ಯುತ್ ಕ್ಷಾಮದ ಬಗ್ಗೆ ವಿವರಿಸುವುದಾಗಿ ಶೋಭಾ ಪ್ರಕಟಿಸಿದರು.

ಕೇಂದ್ರ ಗ್ರಿಡ್ ನಿಂದ ರಾಜ್ಯಕ್ಕೆ ಬರಬೇಕಾದ ವಿದ್ಯುತ್ ಆಂಧ್ರದತ್ತ ಹರಿಯುತ್ತಿದೆ. ಇದರಿಂದ ರಾಜ್ಯದಲ್ಲಿ ಇನ್ನೂ ಒಂದು ತಿಂಗಳ ಕಾಲ ಲೋಡ್ ಶೆಟ್ಟಿಂಗ್ ಜಾರಿಯಲ್ಲಿರುತ್ತದೆ. ಲೋಡ್ ಶೆಟ್ಟಿಂಗ್ ವೇಳಾಪಟ್ಟಿಯನ್ನು ಸೋಮವಾರ ನಿಗದಿಪಡಿಸಲಾಗುವುದು ಎಂದು ಶೋಭಾ ಸ್ಪಷ್ಟಪಡಿಸಿದ್ದಾರೆ.

ಆಂಧ್ರಪ್ರದೇಶದ ರಾಮಗುಂಡಂ ಮತ್ತು ಸಿಂಹಾದ್ರಿಯಲ್ಲಿರುವ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ ಘಟಕಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ದೊರೆಯುತ್ತಿಲ್ಲ. ಕೂಡುಂಕುಳಂ ಅಣುಸ್ಥಾವರದಿಂದ ಬರಬೇಕಿದ್ದ 220 ಮೆಗಾವ್ಯಾಟ್ ವಿದ್ಯುತ್ ಕೂಡ ರಾಜ್ಯಕ್ಕೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

English summary
Karnataka Power Minister Shobha Karandlaje has said that the power shortage in the State is severe. As such Load shedding time table will be announced on Oct 10. After that she will be visiting Delhi to pressurise Central Govt to supply required power and Coal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X