ಎಚ್ ಎನ್ ಕೃಷ್ಣಗೆ ಸಿಕ್ತು ಮಧ್ಯಂತರ ಜಾಮೀನು

ಸಿಐಡಿ ಪೊಲೀಸರು ಎಚ್ ಎನ್ ಕೃಷ್ಣ ಅವರನ್ನು ಶುಕ್ರವಾರ ಬಂಧಿಸಿ, 1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಅ.10 ಕೃಷ್ಣ ಅವರ ದತ್ತುಪುತ್ರಿ ಮದುವೆ ಇರುವ ಹಿನ್ನೆಲೆಯಲ್ಲಿ ಅ.12 ರ ವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ.
ಶನಿವಾರ ರಜೆಯಿರುವುದರಿಂದ ಸೋಮವಾರ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಕೃಷ್ಣ ಸಿಐಡಿ ಪೊಲೀಸರ ಆತಿಥ್ಯದಲ್ಲಿರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಅದರೆ, ಬಂಧನವಾದ ಕೆಲ ಗಂಟೆಗಳ ನಂತರ ಕೃಷ್ಣ ಅವರು ಜಾಮೀನು ಪಡೆದು ಹೊರ ಬಿದ್ದಿದ್ದಾರೆ.
ಕೆಪಿಎಸ್‌ಸಿ 1998, 1999 ಮತ್ತು 2004ರಲ್ಲಿ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ಹಾಗೂ ಅಭ್ಯರ್ಥಗೆ ಜೀವ ಬೆದರಿಕೆ ಆರೋಪ ಕೃಷ್ಣ ಅವರ ಮೇಲಿದೆ. ಕೃಷ್ಣ ಅವರು ಇತ್ತೀಚೆಗೆ ಮಾಹಿತಿ ಆಯೋಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಐಪಿಸಿ ಸೆಕ್ಷನ್ 417, 718, 465, 466, 468, 471, 506, 120-B ಅಡಿಯಲ್ಲಿ ಕೃಷ್ಣ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.











Click it and Unblock the Notifications