ಸುಷ್ಮಾ, ಅಡ್ವಾಣಿ ಯಾತ್ರೆ ಬಸ್ ಹತ್ತುವುದು ಡೌಟು

ಅದರೆ, ಎಲ್ ಕೆ ಅಡ್ವಾಣಿ ಅವರ ಭ್ರಷ್ಟಾಚಾರ ವಿರುದ್ಧದ ಉದ್ದೇಶಿತ ರಥಯಾತ್ರೆಗೆ ವಿಘ್ನ ಎದುರಾಗಿದ್ದು, ಪ್ರಬಲ ನಾಯಕಿ, ವಿದಿಶಾ ಲೋಕಸಭಾ ಕ್ಷೇತ್ರದ ಸಂಸದೆ ಸುಷ್ಮಾ ಸ್ವರಾಜ್ ಅವರು ಲಾಲ್ ಕೃಷ್ಣ ಅಡ್ವಾಣಿ ಅವರ ರಥ ಏರುವುದಿಲ್ಲ ಎಂಬ ಸುದ್ದಿ ಹಬ್ಬಿದೆ.
ಅ.11ರಂದು ಸಮಾಜವಾದಿ ನಾಯಕ ಜೈ ಪ್ರಕಾಶ್ ನಾರಾಯಣ್ ಅವರ ಹುಟ್ಟೂರಾದ ಸಿತಾಬ್ ದಿಯಾರಾದಲ್ಲಿ ಬಿಹಾರ್ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಅ.13ರಂದು ಮಧ್ಯಪ್ರದೇಶದ ರೇವಾ ಜಿಲ್ಲೆಯ ಮಹುಗಂಜ್ ತಲುಪಲಿದೆ. ಆದರೆ, ಸುಷ್ಮಾ ಅವರ ಕ್ಷೇತ್ರ ವಿದಿಶಾ ಹೆಸರನ್ನು ರೂಟ್ ಮ್ಯಾಪ್ ನಿಂದ ಬೇಕಂತಲೇ ತೆಗೆದುಹಾಕಲಾಗಿದೆ.
ವಿದಿಶಾದಲ್ಲಿ ನಿಲ್ಲದೆ ಅಡ್ವಾಣಿ ರಥ ಕಮ್ ಬಸ್ ಭೋಪಾಲ್ ತಲುಪಲಿದೆ ಎಂಬ ಸುದ್ದಿ ಬಿಜೆಪಿ ಮೂಲಗಳಿಂದ ಹೊರಬಿದ್ದಿದೆ.
ಬೃಹತ್ ಯಾತ್ರೆಗೆ ಸಜ್ಜು: ಒಟ್ಟಾರೆ 23 ರಾಜ್ಯಗಳು, 100 ಜಿಲ್ಲೆಗಳು, ಕೇಂದ್ರಾಡಳಿತ ಪ್ರದೇಶ ಸುತ್ತುವ ಅಡ್ವಾಣಿ ಅವರ ರಥ ಒಟ್ಟು 7600 ರಿಂದ 12,000 ಕಿ.ಮೀ ಕ್ರಮಿಸಲಿದೆ.
ಉತ್ತರ ಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ, ಕರ್ನಾಟಕ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಲ ಹಾಗೂ ಅಸ್ಸಾಂ ಪ್ರಮುಖ ನಿಲುಗಡೆ ಸ್ಥಾನಗಳಾಗಿವೆ.
38ದಿನಗಳ ನಂತರ ನ.20 ರಂದು ದೆಹಲಿ ತಲುಪಲಿರುವ ರಥವನ್ನು ಬೃಹತ್ ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು ಎಂದು ರಥಯಾತ್ರೆ ಸಂಚಾಲಕ ಸಂಸದ ಅನಂತ್ ಕುಮಾರ್ ಹೇಳಿದ್ದಾರೆ.












Click it and Unblock the Notifications