ಪಂಜಾಬ್ ನಿಂದ ರಾಜ್ಯಕ್ಕೆ ಹರಿದು ಬರಲಿದೆ ವಿದ್ಯುತ್

Karnataka to purchase Power from Punjab
ಮಡಿಕೇರಿ, ಅ. 1 : ಇಂದಿನಿಂದಲೇ (ಅ. 1) ಜಾರಿಗೆ ಬರುವಂತೆ ಪಂಜಾಬ್ ನಿಂದ 300 ಮೆಗಾವ್ಯಾಟ್ ವಿದ್ಯುತ್ ಖರೀದಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಉಂಟಾಗಿರುವ ಅತೀವ ವಿದ್ಯುತ್ ಕೊರತೆಯನ್ನು ನಿವಾರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಪಂಜಾಬ್ ಸರಕಾರದ ಜೊತೆ ಮಾತುಕತೆ ಮುಗಿದಿದ್ದು, ತಕ್ಷಣದಿಂದಲೇ ಅಲ್ಲಿಂದ ನಮಗೆ ಮುನ್ನೂರು ಮೆಗಾವ್ಯಾಟ್ ವಿದ್ಯುತ್ ಲಭಿಸಲಿದೆ. ಇದರಿಂದ ರಾಜ್ಯದಲ್ಲಿನ ಲೋಡ್ ಶೆಡ್ಡಿಂಗ್ ತುಸು ಕಮ್ಮಿಯಾಗಲಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು. ಕಲ್ಲಿದ್ದಲಿನ ಕೊರತೆಯಿಂದಾಗಿ ರಾಜ್ಯದಲ್ಲಿ ತೀವ್ರ ವಿದ್ಯುತ್ ಬರ ಇರುವುದನ್ನು ಸಚಿವೆ ಒಪ್ಪಿಕೊಂಡರು.

ಕೇಂದ್ರ ಸರಕಾರ ಕಲ್ಲಿದ್ದಲು ಸರಬರಾಜಿನ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಕಲ್ಲಿದ್ದಲು ತಲುಪುವಂತೆ ತುರ್ತು ಕ್ರಮ ಕೈಗೊಂಡರೆ ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿಸಬಹುದು. ಈ ಸಂಬಂಧ ಕೇಂದ್ರ ಸರಕಾರದ ಜೊತೆ ಪತ್ರ ವ್ಯವಹಾರ ನಡೆಸಲಾಗುವುದೆಂದು ಕರಂದ್ಲಾಜೆ ಸುದ್ದಿಗಾರರಿಗೆ ತಿಳಿಸಿದರು.

ಅಕ್ರಮ ಪಡಿತರಚೀಟಿ ವಿರುದ್ಧ ಕ್ರಮ : ರಾಜ್ಯದಲ್ಲಿ ಇದುವರೆಗೆ ಕಂಡು ಬಂದಿರುವ ಸುಮಾರು 30 ಲಕ್ಷ ಅಕ್ರಮ ಪಡಿತರಚೀಟಿದಾರರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ರೇಷನ್ ಕಾರ್ಡ್ ಹೊಂದಿರುವವರು ಇನ್ನೊಂದು ವಾರದೊಳಗೆ ದಾಖಲೆ ನೀಡದಿದ್ದರೆ ಅಂತಹ ಕಾರ್ಡ್ ಗಳನ್ನೂ ಅಕ್ರಮ ಎಂದು ಪರಿಗಣಿಸಲಾಗುವುದೆಂದು ಶೋಭಾ ಎಚ್ಚರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+