ಜವಳಿ ಕಾರ್ಖಾನೆಗೆ ಬೆಂಕಿ, ನಾಲ್ವರು ಸಜೀವ ದಹನ

ಮುಂಜಾನೆ 3.30ರ ಸುಮಾರಿಗೆ ಥಾಣೆಯ ಡೊಂಬಿವಿಲಿಯ ಜವಳಿ ಗಿರಣಿಯಲ್ಲಿ ನಡೆದ ಅಗ್ನಿ ದುರಂತಕ್ಕೆ ಕಾರಣಗಳು ತಿಳಿದು ಬಂದಿಲ್ಲ.
ಸುಮಾರು 12ಕ್ಕೂ ಹೆಚ್ಚು ಅಗ್ನಿ ಶಾಮಕ ದಳ, ಆಂಬ್ಯುಲೆನ್ಸ್ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇದುವರೆವಿಗೂ ಕಾರ್ಖಾನೆ ಒಳಗಿದ್ದ ಸುಮಾರು 18 ಜನ ಕಾರ್ಮಿಕರನ್ನು ರಕ್ಷಿಸಲಾಗಿದೆ. ಆದರೆ, ದಿಢೀರನೇ ಉಂಟಾದ ಬೆಂಕಿಗೆ ನಾಲ್ವರು ಸಜೀವ ದಹನರಾಗಿದ್ದಾರೆ. ಗಾಯಗೊಂಡವರನ್ನು ಥಾಣೆಯ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಈ ಪೂಜಾ ಫ್ಯಾಬ್ರಿಕ್ ಜವಳಿ ಕಾರ್ಖನೆಯ ರಾತ್ರಿ ಪಾಳೆಯದಲ್ಲಿ ಸುಮಾರು 50 ಜನರು ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.












Click it and Unblock the Notifications