ಭೂಕಂಪ ಅಮೆರಿಕದಲ್ಲಿ ಆಗಿದ್ದರೆ ಆವಾಗ ಗೊತ್ತಾಗ್ತಿತ್ತು, ಬೇಳೆ ಕಾಳು!

ಪ್ರಸ್ತುತ ನೇಪಾಳದ ಗೃಹ ಸಚಿವರೂ ಆಗಿರುವ ಗಚೆದಾರ್, ಕಳೆದ ಭಾನುವಾರ ದೇಶದಲ್ಲಿ ಸಿಕ್ಕಿಂ ಕೇಂದ್ರೀಕೃತ ಭೂಕಂಪದ ಸಂತ್ರಸ್ತರಿಗೆ ನೆರವಾಗಲು ಸರಕಾರ ನಡೆಸುತ್ತಿರುವ ಪ್ರಯತ್ನಗಳನ್ನು ಸಂಸತ್‌ನಲ್ಲಿ ವಿವರಿಸುತ್ತಿದ್ದ ಸಂದರ್ಭದಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.
'ಭೂಕಂಪಗಳನ್ನು ತಡೆಯಲು ಸಾಧ್ಯವಿಲ್ಲ. ಭಾರತಕ್ಕಾಗಲಿ ಅಥವಾ ಚೀನಕ್ಕಾಗಲಿ ಹಾಗೆ ಮಾಡುವುದು ಅಸಾಧ್ಯ. ಹೀಗಿರುವಾಗ ನಾವೇನು ಮಾಡಲು ಸಾಧ್ಯ? ಭೂಕಂಪಗಳು ನೇಪಾಳದ ಬದಲಿಗೆ ಅಮೆರಿಕ ಮತ್ತಿತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಂಭವಿಸಲಿ ಎಂದು ನಾನು ಪಶುಪತಿನಾಥನಲ್ಲಿ ಪ್ರಾರ್ಥಿಸುವೆ' ಎಂದು ಗಚೆದಾರ್ ಹೇಳಿದ್ದರು.
ನೂತನ ಪ್ರಧಾನಿ ಬಾಬುರಾಮ್ ಭಟ್ಟಾರಾಯ್ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ 66ನೆ ಮಹಾಧಿವೇಶನದಲ್ಲಿ ಪಾಲ್ಗೊಂಡಿರುವಾಗಲೇ ಗಚೆದಾರ್ ಈ ಹೇಳಿಕೆ ನೀಡಿರುವುದು ನೇಪಾಳ ಸರಕಾರವನ್ನು ಪೇಚಿನಲ್ಲಿ ಸಿಲುಕಿಸಿದೆ.












Click it and Unblock the Notifications