ಅಸಲಿಗೆ ಬ್ರಹ್ಮಿಣಿ ಸ್ಟೀಲ್ಸ್ ಎಂಬುದೇ ನಕಲಿ ಕಂಪನಿ

Brahmini steels is fake
ಹೈದರಾಬಾದ್, ಸೆ.22: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ ಸುಮಾರು 20 ಸಾವಿರ ಕೋಟಿ ರೂ ಬಂಡವಾಳದ ಬ್ರಹ್ಮಿಣಿ ಸ್ಟೀಲ್ಸ್ ಒಂದು ಬೇನಾಮಿ ನಕಲಿ ಸಂಸ್ಥೆ ಎಂದು ಸಿಬಿಐ ಅಭಿಪ್ರಾಯಪಟ್ಟಿದೆ.

ರೆಡ್ಡಿ ಸಹವರ್ತಿಗಳು ಕಬ್ಬಿಣದ ಅದಿರನ್ನು ವಿದೇಶಿ ಬೇನಾಮಿ ಕಂಪನಿಗಳಿಗೆ ಅಗ್ಗದ ದರದಲ್ಲಿ ಮಾರಾಟ ಮಾಡಿ ಅದನ್ನೇ ಪುನಃ ಮಾರಾಟ ಮಾಡಿ ಆ ಲಾಭವನ್ನು ಬ್ರಹ್ಮಿಣಿ ಸ್ಟೀಲ್ಸ್ ಹೂಡಿರುವುದಾಗಿ ಸಿಬಿಐ ತನಿಖೆ ತಿಳಿಸಿದೆ.

ಓಬಳಾಪುರಂ ಗಣಿ ಹಗರಣವನ್ನು 'ನೈಸರ್ಗಿಕ ಗಣಿ ಸಂಪತ್ತಿನ ಲೂಟಿಯಲ್ಲಿ ಬೃಹತ್ ಹಗರಣ' ಎಂದು ಬಣ್ಣಿಸಿರುವ ಸಿಬಿಐ ಅಧಿಕಾರಿಗಳು ಆಂಧ್ರಪ್ರದೇಶದ ಹಲವಾರು ಅಧಿಕಾರಿಗಳು ಅಕ್ರಮ ಗಣಿಗಾರಿಕೆಗೆ ಪ್ರೋತ್ಸಾಹಿಸಿ ನೀಡಿರುವುದನ್ನು ಪತ್ತೆಹಚ್ಚಿದೆ.

ಪರವಾನಗಿ ಪಡೆಯುವ ಗಣಿ ಪ್ರದೇಶವೇ ಬೇರೆ, ಅದಿರನ್ನು ತೆಗೆಯುವ ಗಣಿಯೇ ಬೇರೆಯಾಗಿದೆ. ಆಂಧ್ರದ ಹೆಚ್ಚುವರಿ ಗಣಿ ನಿರ್ದೇಶಕರಾದ ಲಿಂಗಾರೆಡ್ಡಿ ಅವರು ಇದರಲ್ಲಿ
ಭಾಗಿಯಾಗಿರುವುದಾಗಿ ಸಿಬಿಐ ತಿಳಿಸಿದೆ.

ವೈಎಸ್ ಆರ್ ಲಾಕರ್ ಗೂ ಗುತ್ತು: ಜನಾರ್ದನ ರೆಡ್ಡಿಯ ಪತ್ನಿ ಲಕ್ಷ್ಮಿ ಅರುಣಾ ಅವರ ಬ್ಯಾಂಕ್ ಲಾಕರ್ ಮತ್ತು ಬೇನಾಮಿ ಕಂಪನಿಗಳನ್ನೂ ತನಿಖೆಗೆ ಒಳಪಡಿಸಲಾಗುತ್ತದೆ.

ಆಂಧ್ರದ ಮಾಜಿ ಮುಖ್ಯಮಂತ್ರಿ ವೈ ಎ ಸ್‌ಆರ್ ಮತ್ತು ರೆಡ್ಡಿ ಅಕ್ರಮವಾಗಿ ಗಣಿ ಪರವಾನಗಿ ನೀಡಿ, ಬ್ಯಾಂಕುಗಳಲ್ಲಿ ಫ್ಯಾಕ್ಟರಿಗಳನ್ನು ಒತ್ತೆ ಇಟ್ಟು ಅರಣ್ಯ ಇಲಾಖೆಯ ನಿಯಮಗಳನ್ನೂ ಉಲ್ಲಂಘಿಸಿ ಗಣಿಗಾರಿಕೆ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ವೈಎಸ್ ಆರ್ ಅವರ ಪುತ್ರ ಜಗನ್ ಮೇಲಿದ್ದ ಸಿಬಿಐ ಕಣ್ಣು ಈಗ ವೈಎಸ್ ರಾಜಶೇಖರ ರೆಡ್ಡಿ ಅವರ ಬ್ಯಾಂಕ್ ಖಾತೆ ಮೇಲೂ ನೆಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+