ಯಡಿಯೂರಪ್ಪ ಜಾಮೀನು ಅ.3ಕ್ಕೆ ಅಂತಿಮ ತೀರ್ಪು

ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಎರಡನೇ ಖಾಸಗಿ ದೂರಿನ ವಿಚಾರಣೆ ಮುಂದುವರೆದಿದೆ. ಸೆ.22ರಂದು ಉತ್ತರಹಳ್ಳಿ, ರಾಚೇನಹಳ್ಳಿ,ಅರಕೆರೆ ಡಿನೋಟೀಫಿಕೇಷನ್ ಪ್ರಕರಣ ವಿಚಾರಣೆಗೆ ಬರಲಿದೆ ಎಂದು ವಿಶೇಷ ನ್ಯಾಯಾಲಯದಿಂದ ಸುದ್ದಿ ಸಿಕ್ಕಿದೆ.
ಏನು ಆರೋಪ? : ಬೆಂಗಳೂರಿನ ಅರಕೆರೆ, ದೇವರಚಿಕ್ಕನಹಳ್ಳಿ ಮತ್ತು ಗೆದ್ದಲಹಳ್ಳಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ 'ಡಿನೋಟಿಫಿಕೇಷನ್'ಗೆ ಸಂಬಂಧಿಸಿದ ಪ್ರಕರಣ.
ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಎರಡನೇ ಖಾಸಗಿ ದೂರಿನ ಪ್ರಮುಖ ಆರೋಪಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ. ಇತರೆ 14 ಆರೋಪಿಗಳು ಇಂತಿದ್ದಾರೆ:
* ಶಿವಮೊಗ್ಗ ತಾಲ್ಲೂಕಿನ ಕುಂಸಿ ಹೋಬಳಿಯ ಎನ್.ಅಕ್ಕಮಹಾದೇವಿ,
* ಹೊನ್ನಾಳಿ ಪಟ್ಟಣದ ಎನ್.ಎಸ್.ಮಹಾಬಲೇಶ್ವರ,
* ಬೆಂಗಳೂರಿನ ಬಿಟಿಎಂ ಬಡಾವಣೆಯ ಸತ್ಯಕುಮಾರಿ,
* ದೊಮ್ಮಲೂರಿನ ಮೋಹನ್ ರಾಜ್,
* ಜೆ.ಪಿ.ನಗರ ಮೂರನೇ ಹಂತದ ವಿ.ಪ್ರಕಾಶ್,
* ದೇವರಚಿಕ್ಕನಹಳ್ಳಿಯ ಕಾಮಾಕ್ಷಮ್ಮ,
* ಕುಂಸಿಯ ಎಂ.ಮಂಜುನಾಥ್,
* ಬೆಂಗಳೂರು ಜಯನಗರ 4ನೇ 'ಟಿ' ಬ್ಲಾಕ್‌ನ ವಿ.ಅನಿಲ್‌ಕುಮಾರ್,
* ಬನಶಂಕರಿ ಎರಡನೇ ಹಂತದ ಬಿ.ರಮೇಶ್,
* ಗೆದ್ದಲಹಳ್ಳಿಯ ಶಾಂತಾ ದೇವಿ,
* ಫ್ರೇಜರ್ ಟೌನ್‌ನ ಶಾಂತಾ ಬಾಯಿ,
* ನ್ಯೂ ಬಂಬೂ ಬಜಾರ್‌ನ ಇಸ್ಮಾಯಿಲ್ ಷರೀಫ್,
* ಜಯನಗರ 4ನೇ 'ಟಿ' ಬ್ಲಾಕ್‌ನ ವಿ.ಮಂಜುನಾಥ್
* ಪುಟ್ಟೇನಹಳ್ಳಿಯ ಕೆ.ಶಿವಪ್ಪ
ವಕೀಲರು : ಯಡಿಯೂರಪ್ಪ ಪರ ವಕೀಲ ರವಿ ಬಿ.ನಾಯ್ಕ, ಸಿರಾಜಿನ್ ಬಾಷಾ ಪರ ವಕೀಲ ಸಿ.ಎಚ್.ಹನುಮಂತರಾಯ. ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್.
ಸ್ಥಳ: ಬೆಂಗಳೂರಿನ ಸಿವಿಲ್ ಕೋರ್ಟ್ ಕಟ್ಟಡ, ಲೋಕಾಯುಕ್ತ ವಿಶೇಷ ನ್ಯಾಯಾಲಯ.
ಜಾಮಿನು ತೀರ್ಪು ಹೊರಬರುವುದಕ್ಕೂ ಮುನ್ನ ಇತರೆ ಪ್ರಕರಣಗಳು ಹೇಗೆ ಯಡಿಯೂರಪ್ಪ ಅವರನ್ನು ಕಾಡುತ್ತದೆ.ಕಾದು ನೋಡಿ..












Click it and Unblock the Notifications