ಮಂಗಳೂರಲ್ಲಿ ವಿಕೃತ ನಡವಳಿಕೆಯ ಕಾಮುಕನ ಬಂಧನ

ಆತನ ಅಸಹ್ಯಕರ ನಡವಳಿಕೆಯನ್ನು ಗಮನಿಸುತ್ತಿದ್ದ ಆಟೋ ಚಾಲಕರು ಮಾಧ್ಯಮಮಿತ್ರರ ಸಹಾಯದೊಂದಿಗೆ ಆತ ವಾಸಿಸುತ್ತಿದ್ದ ಪೊದೆಗಳ ಮೇಲೆ ದಾಳಿ ಮಾಡಿ ಬಂಧಿಸಿ ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ದಾಳಿ ಮಾಡಿದಾಗ ಮಹಿಳೆಯರ ಬಟ್ಟೆ, ಒಳಉಡುಪು, ಕಾಂಡೋಮ್ ಗಳು ದೊರೆತಿವೆ.
ಈ ಮನೋವಿಕೃತಿಯ ಮನುಷ್ಯ ಸುದೆ ಮುಗೇರು ಎಂಬ ಪ್ರದೇಶದಲ್ಲಿ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದ. ನಂತರ ಪೊದೆಗಳನ್ನೇ ಮನೆಮಾಡಿಕೊಂಡು ತನ್ನ ವಿಕೃತಿಗಳನ್ನು ಮುಂದುವರಿಸಿದ. ದಾರಿಹೋಕ ಮಹಿಳೆಯರಿಂದ ಸಾಕಷ್ಟು ಆಕ್ಷೇಪಣೆಗಳು ಈತನ ಬಗ್ಗೆ ಕೇಳಿಬಂದಿದ್ದವು. ಲೇಡೀಸ್ ಹಾಸ್ಟೆಲ್ ನಿಂದ ಈತ ಮಹಿಳೆಯರ ಉಡುಪುಗಳನ್ನು ಕದಿಯುತ್ತಿದ್ದ.
ಪೊಲೀಸ್ ವಿಚಾರಣೆಯಲ್ಲಿ, ತಾನೊಬ್ಬ ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದು, ಮಹಿಳೆಯರನ್ನು ಕಂಡಕೂಡಲೆ, ಅವರ ಉಡುಪುಗಳನ್ನು ನೋಡಿದ ಕೂಡಲೆ ಕಾಮನೆ ಕೆರಳುತ್ತದೆಂದು ಸಂತೋಷ್ ಹೇಳಿಕೊಂಡಿದ್ದಾನೆ. ಈತ ಮತ್ತಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.











Click it and Unblock the Notifications