ವಿದ್ಯಾ ಎದೆಸೀಳು ನೋಡಲು ಬೀದರ್ ಗುಡ್ಡ ಹತ್ತಿದ ಪಡ್ಡೆಗಳು

'ನಟಿ ವಿದ್ಯಾ ಎದೆಸೀಳು ಎದ್ದುಕಾಣುವಂತಹ ರವಿಕೆ ತೊಟ್ಟಿದ್ದಾರೆ' ಎಂದು ಕೋಟೆ ತಲುಪಿದ ಮಂದಿ ಮೊಬೈಲುಗಳ ಮೂಲಕ ಊರಲ್ಲಿ ಉಳಿದವರಿಗೆ ಹೇಳಿದ್ದೇ ತಡ, 'ಡರ್ಟಿ ಪಿಕ್ಚರ್' ಆಸ್ವಾದಿಸುವ ಗುಂಗಿನಲ್ಲಿ ನೂರಾರು ಮಂದಿ 30 ಅಡಿ ಎತ್ತರದ ಬೀದರ್ ಗುಡ್ಡ ಹತ್ತಿಯೇ ಬಿಟ್ಟಿದ್ದಾರೆ. ಅಲ್ಲಿ ದೀವಾನ್-ಎ-ಖಾಸ್ ಮತ್ತು ದೀವಾನ್-ಎ-ಆಮ್ ಸುತ್ತಮುತ್ತ ಬೆಡಗಿ ವಿದ್ಯಾ ಅಭಿಮಾನಿಗಳಿಗಾಗಿಯೇ ಕಾಯುತ್ತಿರುವಂತೆ ಶತಪಥ ಹಾಕುತ್ತಿರುವುದು ಕಂಡುಬಂದಿದೆ.
ನಟ ಇಮ್ರಾನ್ ಹಷ್ಮಿ ಜತೆ ಒಂದು ಹಾಡಿಗಾಗಿ ವಿದ್ಯಾ, ರವಿಕೆಯಿಲ್ಲದ ತಮ್ಮ ಎದೆಯ ಮೇಲೆ ಸೀರೆ ಸುತ್ತಿಕೊಂಡು ಕುಣಿದರು. ಮನಸಾರೆ ಇದನ್ನು ನೋಡಿದ ಅಭಿಮಾನಗಳು ದಣಿದರು.
ಕೆಲವರಂತೂ ಜೂಮ್ ಲೆನ್ಸ್ ಕ್ಯಾಮರಾ, ಬೈನಾಕುಲರುಗಳನ್ನು ಕಣ್ಣಿಗೆ ಮೆತ್ತಿಕೊಂಡೇ ವಿದ್ಯಾ ಎದೆಸೀಳಿಗಾಗಿ ಸಿಳ್ಳೆ ಹೊಡೆಯುತ್ತಾ ತಡಕಾಡುತ್ತಿದ್ದರು. ಬಹಳಷ್ಟು ಮಂದಿ ತಮ್ಮ ಮೊಬೈಲುಗಳನ್ನು ಆನ್ ಮಾಡಿದ್ದೂ ಕಂಡುಬಂದಿತು. ಪರಿಸ್ಥಿತಿ ಕೈತಪ್ಪುತ್ತಿದೆ ಎಂದು ಸಿನಿಮಾ ಸೆಟ್ ಮಂದಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸಾಮಾನ್ಯವಾಗಿ ಸಿನಿಮಾದಲ್ಲಿ ಪೊಲೀಸರು ಬಂದರೆಂದರೆ ಸಿನಿಮಾ ಮುಗಿಯುತ್ತಿದೆ ಎಂದೇ ಅರ್ಥ. ಹಾಗಾಗಿ, ವಿದ್ಯಾ ಪಿಕ್ಚರ್ ಮುಗಿಯಿತು ಎಂದು ಪರಿಭಾವಿಸಿದ ಮಂದಿ ಪೊಲೀಸರ ದರ್ಶನವಾಗುತ್ತಿದ್ದಂತೆ ಚದುರಿದ ಚಿತ್ರದಂತಾಗಿದ್ದಾರೆ.












Click it and Unblock the Notifications