4 ಲಕ್ಷ ಕೋಟಿ ಕಪ್ಪುಹಣ ವಾಪಸ್ ಬಾ..ಬಾ :ರಾಮದೇವ್

Baba Ramdev's Bharat Swambiman Yatra
ಝಾನ್ಸಿ, ಸೆ.20: ಕಪ್ಪು ಹಣದ ವಿರುದ್ಧ ಭಾರತದ ಜನರನ್ನು ಜಾಗೃತೆಗೊಳಿಸಲು ಪಣತೊಟ್ಟಿರುವ ಯೋಗಗುರು ಬಾಬಾ ರಾಮದೇವ್ ಅವರು 'ಭಾರತ್ ಸ್ವಾಭಿಮಾನ್ ಯಾತ್ರೆ' ಆರಂಭಿಸಿದ್ದಾರೆ.

ಝಾನ್ಸಿಯಿಂದ ಆರಂಭವಾದ ಈ ಯಾತ್ರೆ 1,00,000 ಕಿ.ಮೀ ಕ್ರಮಿಸಿ ಪ್ರಯಾಗ್ ನಲ್ಲಿ ಕೊನೆಗೊಳ್ಳಲಿದೆ.

ಝಾನ್ಸಿಯ ವೀರರಾಣಿ ಲಕ್ಷ್ಮೀಭಾಯಿ ನೆಲದಿಂದ ಈ ಮಹಾಸಂಗ್ರಾಮ ಆರಂಭಿಸುತ್ತಿದ್ದೇನೆ. ಕಪ್ಪು ಹಣ, ಭ್ರಷ್ಟಾಚಾರ ವಿರುದ್ಧ ಜನತೆಯನ್ನು ಎಚ್ಚರಿಸುವುದು ನನ್ನ ಉದ್ದೇಶ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಪಾಪಕೂಪವಾಗಿದೆ ಎಂದಿರುವ ರಾಮದೇವ್, ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಆಡಳಿತವನ್ನು ಶ್ಲಾಘಿಸಿದ್ದಾರೆ.

4 ಲಕ್ಷ ಕೋಟಿ ರು ಕಪ್ಪು ಹಣ ಭಾರತಕ್ಕೆ ಹಿಂತಿರುಗುವವರೆಗೂ ನಮ್ಮ ಹೋರಾಟ ನಿಲ್ಲದು, ಬಿಜೆಪಿ ಯಾತ್ರೆ, ಉಪವಾಸ ಬಗ್ಗೆ ಹೇಳಿಕೆ ನೀಡಲು ನಾನು ಬಿಜೆಪಿ ವಕ್ತಾರನಲ್ಲ ಎಂದು ರಾಮದೇವ್ ಗುಡುಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+