• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಬಿಡದ ಭೂಕಂಪ ಭೂತ: ಮೃತರ ಸಂಖ್ಯೆ 40ಕ್ಕೆ

By Srinath
|

ನವದೆಹಲಿ, ಸೆ.19: ಉತ್ತರ ಭಾರತ ಇನ್ನೂ ಭೂಕಂಪದ ಕರಿಛಾಯೆಯಲ್ಲಿಯೇ ಇದೆ. ಈ ಹಿಂದೆ ಭೀಕರ ಭೂಕಂಪಕ್ಕೊಳಗಾಗಿದ್ದ ಮಹಾರಾಷ್ಟ್ರದ ಲಾತೂರ್ ನಲ್ಲಿ ಸೋಮವಾರ ಬೆಳಗ್ಗೆ 6.30ರಲ್ಲಿ ಲಘು ಭೂಕಂಪ ಆಗಿದೆ. ಇನ್ನು ಭಾನುವಾರ ಸಂಜೆ 6.30ರಲ್ಲಿ ದೇಶದ ಉತ್ತರ ಮತ್ತು ಈಶಾನ್ಯ ಭಾಗ ಭೂಕಂಪನದಿಂದ ತತ್ತರಿಸಿದೆ. ಸುಮಾರು 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿದ್ದಾರೆ.

ಈ ಮಧ್ಯೆ ಸಿಕ್ಕಿಂನಲ್ಲಿ ರಕ್ಷಣಾ ಕಾರ್ಯಕ್ಕೆಂದು ತೆರಳಿದ್ದ ಬಸ್ಸೊಂದು ನಾಪತ್ತೆಯಾಗಿದೆ. ಇದರಲ್ಲಿ 50 ಮಂದಿ ಯೋಧರು ಇದ್ದರೆನ್ನಲಾಗಿದೆ. ಭೂಸ್ಖಲನದಿಂದ ಬಸ್ಸು ಪ್ರಪಾತಕ್ಕೆ ಬಿದ್ದಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಭೂಕಂಪದ ಸಮ್ಮುಖದಲ್ಲಿ ಬಂಗಾಳದ ಉತ್ತರ ಭಾಗ, ಬಿಹಾರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಚಲಿಸುವ ರೈಲುಗಳೆಲ್ಲವೂ ಗಂಟೆಗೆ 30ರಿಂದ 40 ಕಿ.ಮೀ. ವೇಗ ಮಿತಿಯಲ್ಲಿಯೇ ಸಾಗಬೇಕೆಂದು ರೈಲ್ವೆ ಇಲಾಖೆ ಆದೇಶಿಸಿದೆ.

ನಿನ್ನೆ ಸಂಜೆ ಸಭವಿಸಿದ ಭೂಕಂಪ ಸಿಕ್ಕಿಂನಿಂದ 50 ಕಿ.ಮೀ. ದೂರದಲ್ಲಿ ನೇಪಾಳದ ಗಡಿ ಬಳಿಯ ಮ್ಯಾಂಗಾನ್ ಮತ್ತು ಸಾಕ್ಯೋಂಗ್ ಪ್ರದೇಶದಲ್ಲಿ ಕೇಂದ್ರ ಬಿಂದು ದಾಖಲಿಸಿತ್ತು. ನೇಪಾಳ, ಸಿಕ್ಕಿಂ, ಈಶಾನ್ಯ ರಾಜ್ಯಗಳೇ ಅಲ್ಲದೆ ದೆಹಲಿ, ಲಖನೌ ಸೇರಿದಂತೆ ನೂರಾರು ಊರುಗಳಲ್ಲಿ ಭೂಮಿ ಕಂಪಿಸಿದ್ದು ಸಾವಿರಾರು ಮಂದಿ ಆತಂಕದಿಂದ ಮನೆಯಿಂದ ಹೊರಗೆ ಬಂದು ರಸ್ತೆಗಳಲ್ಲಿ ನಿಂತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಕಳೆದ 20 ವರ್ಷಗಳಲ್ಲಿ ಇದು ಗರಿಷ್ಠ ಪ್ರಮಾಣದ ಭೂಕಂಪ ಇದಾಗಿದೆ.

ಕಳೆದ ಎರಡು ದಶಕಗಳಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ ಅತಿ ದೊಡ್ಡ ಪ್ರಮಾಣದ ಭೂಕಂಪನ ಇದಾಗಿದೆ. ಸಿಕ್ಕಿಂನಲ್ಲಿ ಭಾನುವಾರ ಎರಡು ಸಲ ಭೂಮಿ ಕಂಪಿಸಿದ್ದು ಮೊದಲ ಬಾರಿಗೆ ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆ ಇದ್ದರೆ, ಎರಡನೇ ಸಲ ಅದು 5.3ರಷ್ಟಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ಮೂಲಗಳು ಖಚಿತ ಪಡಿಸಿವೆ.

ಅಸ್ಸಾಂ, ಮೇಘಾಲಯ, ತ್ರಿಪುರ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ರಾಜಸ್ತಾನ, ಚಂಡಿಗಡ, ದೆಹಲಿ ಸೇರಿದಂತೆ ಉತ್ತರ ಮತ್ತು ಈಶಾನ್ಯ ಭಾರತದ ಬಹುತೇಕ ಕಡೆ ಕಂಪನದ ಅನುಭವವಾಗಿದೆ. ಪಶ್ಚಿಮ ಬಂಗಾಳದ ಉತ್ತರ ಭಾಗದ ನೂರಾರು ಮನೆಗಳು ಕುಸಿದಿವೆ. ಆದರೆ ಗಾಯಾಳುಗಳ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On Monday morning at 6.30 am a moderate earthquake is reported in Gujarat. Earlier, A 6.8-magnitude earthquake struck the Sikkim-Nepal border area late Sunday evening and sent shockwaves across north and east India and Bangladesh. In the meanwhile it is reported that a truck carrying military personel is missing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more