ಗುಂತಕಲ್ಲಿನಲ್ಲಿ ಸಿಕ್ಕ ದುಡ್ಡು ಕಡಪಕ್ಯಾಕೆ ಹೋಗುತ್ತಿತ್ತು?

Seized money in Guntakal
ಬಳ್ಳಾರಿ, ಸೆ. 16 : ಗುಂತಕಲ್ ಹನುಮಾನ್ ಜಂಕ್ಷನ್ ಬಳಿ ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇರಿಸಲಾಗಿದೆ. ಬಂಧಿತ ಇಬ್ಬರನ್ನು ಉರವಕೊಂಡ ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರನ್ನು ಸಿಬಿಐ ಅಧಿಕಾರಿಗಳು ಗುರುವಾರ ಇಡೀ ರಾತ್ರಿ ವಿಚಾರಣೆ ನಡೆಸಿದ್ದಾರೆ.

ಗುರುವಾರ ಸಂಜೆ ವೇಳೆಗೆ ಖಚಿತ ಮಾಹಿತಿ ಮೇರೆಗೆ ಗುಂತಕಲ್ಲು ಪೊಲೀಸರು ಬಳ್ಳಾರಿಯಿಂದ ಕಡಪಕ್ಕೆ ಹೋಗುತ್ತಿದ್ದ ಲಾರಿಯನ್ನು ತಡೆದು ವಿಚಾರಣೆ ನಡೆಸಿದಾಗ 4 ಬ್ಯಾಗ್‌ಗಳಲ್ಲಿದ್ದ 4 ಕೋಟಿ 95 ಲಕ್ಷ ರೂಪಾಯಿಗಳನ್ನು ಪತ್ತೆ ಮಾಡಿದ್ದರು.

ಈ ಸಂದರ್ಭದಲ್ಲಿ ಪೊದ್ದಟೂರು ನಿವಾಸಿಗಳಾದ ಲಾರಿ ಮಾಲೀಕ/ಚಾಲಕ ವೆಂಕಟರಾಮಿ ರೆಡ್ಡಿ ಮತ್ತು ಈತನ ಸ್ನೇಹಿತ ಈಶ್ವರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದರು. ಈ ಮಾಹಿತಿ ಪಡೆದ ಬಳ್ಳಾರಿಯಲ್ಲೇ ಇದ್ದ ಸಿಬಿಐ ಅಧಿಕಾರಿಗಳು ಗುಂತಕಲ್ಲುಗೆ ತೆರಳಿ ಬಂಧಿತರನ್ನು ಇಡೀ ರಾತ್ರಿ ವಿಚಾರಣೆ ಮಾಡಿ ಹಣದ ಮೂಲಗಳನ್ನು ತಿಳಿದಿದ್ದಾರೆ ಎನ್ನಲಾಗಿದೆ.

ಸಿಬಿಐ ಕಸ್ಟಡಿಯಲ್ಲಿರುವ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸ ರೆಡ್ಡಿಯ ಪತ್ನಿ ಪ್ರಸ್ತುತ ಕಡಪದಲ್ಲಿದ್ದು, ಈ ಹಣವನ್ನು ಕಡಪಕ್ಕೆ ಸಾಗಿಸುತ್ತಿರುವುದಾಗಿ ಬಂಧಿತರು ಸಿಬಿಐ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಡಪದಲ್ಲಿ ಈ ಲಾರಿ ಚಾಲಕನನ್ನು ಸಂಪರ್ಕಿಸುವ ಮೊಬೈಲ್ ಸಂಖ್ಯೆಯನ್ನು ಕೂಡ ಸಿಬಿಐ ತೆಗೆದುಕೊಂಡು ಆ ಸಂಖ್ಯೆಯ ವಿವಿರಗಳನ್ನು ಸಂಗ್ರಹಿಸುತ್ತಿದೆ.

ಗುಂತಕಲ್ಲು ನ್ಯಾಯಾಲಯದ ನ್ಯಾಯಾಧೀಶರು ರಜೆಯ ಮೇಲೆ ಹೋಗಿರುವ ಕಾರಣ ಬಂಧಿತರನ್ನು ಉರವಕೊಂಡ ನ್ಯಾಯಾಲಯದ ನ್ಯಾಯಾಧೀಶರ ಸಮ್ಮುಖದಲ್ಲಿ ಹಾಜರು ಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+