ಕಾಲಿಗೆ ಬೇಡಿ ಬಿದ್ದಿರುವ ಶಿವಪ್ಪನ ಕಾಯೋ ತಂದೆ

ಶಿವಪ್ಪ ಇರುವುದು ಯಾದಗಿರಿ ಜಿಲ್ಲಾಕೆಂದ್ರದಿಂದ ಸಮೀಪ ವಿರುವ ಮುಷ್ಟುರು ಗ್ರಾಮದಲ್ಲಿ. ಕುಡಿದು ಕಂಡಕಂಡವರಿಗೆ ಹೊಡೆಯುತ್ತಿದ್ದ. ಶಿವಪ್ಪನಿಗೆ ಹುಚ್ಚುಹಿಡಿದಿರಬಹುದೆಂದು ಕಾಲಿಗೆ ಬೇಡಿ ಹಾಕಿ, ಮನೆಯವರೇ ಅಮಾನವೀಯ ಕೃತ್ಯ ಮೆರೆದಿದ್ದಾರೆ. ಬೇಡಿ ಯಾಕೆ ಹಾಕಿದ್ದಾರೆ ಎಂದು ಕೇಳಿದರೆ, ಸುಮ್ಮನೆ ಹಾಕಿದ್ದಾರೆ ಸರ್ ಅಂತ ನಕ್ಕುಬಿಡುತ್ತಾನೆ.
ವರ್ಷದಿಂದ ಕೂಡಿ ಹಾಕಿದ್ದಲ್ಲದೆ ಮಾನಸಿಕ ಕೇಂದ್ರದಲ್ಲಿ ಚಿಕಿತ್ಸೆ ಕೂಡ ಕೊಡಿಸದಿರುವುದು ಅಮಾನವೀಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಊರವರು ಆಡಿಕೊಳ್ಳುತ್ತಿದ್ದಾರೆ. ಈತನನ್ನು ಕೂಡಲೆ ಹುಚ್ಚಾಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಬೇಕು ಎನ್ನುವುದು ಅವರ ವಾದ.
ಮುಷ್ಟುರು ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಕುರಿತು ಆಗಮಿಸಿದ ಯಾದಗಿರಿ ಜಿಲ್ಲಾಧಿಕಾರಿ ಗುರನೀತ್ ತೇಜ್ ಮೆನನ್, ಸಹಯಕ ಆಯುಕ್ತೆ ಕವಿತಾ ಮನ್ನಿಕೇರಿ, ಹಾಗೂ ಪೊಲೀಸ್ ಅಧಿಕಾರಿಗಳು ಈತನ ಎದುರಿಗೆ ತಿರುಗಾಡಿದ್ದರೂ ಕೂಡ ಯಾಕೆ ಬೇಡಿ ಹಾಕಿದ್ದಾರೆ ಎಂದು ಕೇಳಿಲ್ಲ. ಇವರಿಗೆ ಮಾನವೀಯತೆ ಇಲ್ಲವೆ?












Click it and Unblock the Notifications