ಬಳ್ಳಾರಿಯಿಂದ ಲಾರಿಯಲ್ಲಿ ಸಾಗಿಸುತ್ತಿದ್ದ 3.85 ಕೋಟಿ ರು. ವಶ

Cash belonging to Srinivas Reddy seized
ಬಳ್ಳಾರಿ, ಸೆ. 16 : ಬಳ್ಳಾರಿಯಿಂದ ಹೈದರಾಬಾದ್‌ಗೆ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3 ಗೋಣಿಚೀಲದಲ್ಲಿ ತುಂಬಿದ್ದ 3 ಕೋಟಿ 85 ಲಕ್ಷ ರು.ಗಳನ್ನು ಗುಂತಕಲ್ಲು ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಸಿಬಿಐ ಬಂಧನದಲ್ಲಿರುವ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸ ರೆಡ್ಡಿ ಅವರಿಗೆ ಈ ಹಣ ಸೇರಿದ್ದು ಎಂಬ ಮಾಹಿತಿ ದೊರೆತಿದೆ.

ವಿಚಾರಣೆಗೆ ಒಳಪಟ್ಟವರು ಬಳ್ಳಾರಿ ನಿವಾಸಿ, ಆಂಧ್ರ ನೋಂದಣಿಯ (ಎಪಿ 04, ಎಕ್ಸ್ 9009) ಲಾರಿಯ ಮಾಲೀಕ ಮತ್ತು ಚಾಲಕ ವೆಂಕಟರಾಮರೆಡ್ಡಿ (40) ಮತ್ತು ಪೊದ್ದಟೂರು ನಿವಾಸಿ ಈಶ್ವರರೆಡ್ಡಿ. ಇವರು ಗುಂತಕಲ್ಲು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ನಾವುಗಳು ಹೈವೇನಲ್ಲಿ ನಿಂತಿದ್ದಾಗ ಇಂಡಿಕಾ ಕಾರಿನಲ್ಲಿ ಬಂದ ಇಬ್ಬರು ನಮಗೆ ಈ ಬ್ಯಾಗ್ ನೀಡಿ ಹೈದರಾಬಾದ್‌ಗೆ ಈ ಬ್ಯಾಗ್ ತಲುಪಿಸಿ. ಅಲ್ಲಿ ಶ್ರೀನಿವಾಸರೆಡ್ಡಿ ಎನ್ನುವವರು ಬ್ಯಾಗ್ ಪಡೆದು 20,000 ರೂಪಾಯಿ ನೀಡುತ್ತಾರೆ ಎಂದು ತಿಳಿಸಿದ ಕಾರಣ ಈ ಬ್ಯಾಗ್ ತಂದಿದ್ದೇವೆ. ಬ್ಯಾಗ್‌ನಲ್ಲಿ ಏನಿದೆ ಎನ್ನುವ ಮಾಹಿತಿ ನಮಗಿಲ್ಲ ಎಂದು ಇಬ್ಬರೂ ಪೊಲೀಸರಿಗೆ ತಿಳಿಸಿದ್ದಾರೆ.

ಈ ಅಕ್ರಮ ಸಾಗಾಟದ ತನಿಖೆಗಾಗಿ ಆದಾಯ ತೆರಿಗೆ ಅಧಿಕಾರಿಗಳು ಗುಂತಕಲ್ಲು ಪೊಲೀಸ್ ಠಾಣೆಗೆ ಶುಕ್ರವಾರ ಭೇಟಿ ನೀಡಲಿದ್ದಾರೆ. ಕಬ್ಬಿಣದ ಅದಿರು ಸಾಗಿಸುವ ನೆಪದಲ್ಲಿ ಈ ರೀತಿ ಹಣ ಸಾಗಿಸುವುದು ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿಗಳು ಮೊದಲಿನಿಂದ ನಡೆಸಿಕೊಂಡು ಬಂದಿರುವ ದಂಧೆ ಎಂಬುದು ಪೊಲೀಸರ ಹೇಳಿಕೆ.

ಬಳ್ಳಾರಿಯ ನಿವಾಸಿಯೋರ್ವರು ಗುಂತಕಲ್ಲು ಪೊಲೀಸರಿಗೆ ಮತ್ತು ಅನಂತಪುರಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರವಾಣಿ ಕರೆ ಮಾಡಿ, ಲಾರಿ ಸಂಖ್ಯೆಯನ್ನು ನೀಡಿ ನೂರಾರು ಕೋಟಿ ರೂಪಾಯಿ ಅಕ್ರಮವಾಗಿ ಹೈದರಾಬಾದ್ ಸೇರುತ್ತಿರುವ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಲಾರಿಯನ್ನು ತಡೆದು, ಹಣವನ್ನು ಪತ್ತೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+