ವೈಎಸ್ಆರ್ ರೆಡ್ಡಿ ಭ್ರಷ್ಟಾಚಾರದಲ್ಲಿ ನಂ.1: ವಿಕಿ'ಲೀಕ್ಸ್'

ಚೆನ್ನೈನಲ್ಲಿನ ದೂತಾವಾಸ ಅಮೆರಿಕಕ್ಕೆ ಕಳಿಸಿದ್ದ ವರದಿಯ ಆಧಾರದಲ್ಲಿ ವಿಕಿಲೀಕ್ಸ್ ಇದನ್ನು ಉಲ್ಲೇಖಿಸಿದೆ. ವೈಎಸ್‌ಆರ್ ಹಲವು ಜನಪ್ರಿಯ ಯೋಜನೆಗಳನ್ನು ಕೈಗೊಂಡಿರಬಹುದು. ಆದರೆ ಅದೆಲ್ಲದರಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.
ರಾಷ್ಟ್ರೀಯ ಸರಾಸರಿ ಅನ್ವಯ ಯಾವುದೇ ಸರ್ಕಾರಿ ಯೋಜನೆಯ ಶೇ.5ರಿಂದ 7ರಷ್ಟು ಹಣ ಭ್ರಷ್ಟರ ಕೈ ಸೇರುತ್ತದೆ. ಆದರೆ ವೈಎಸ್‌ಆರ್ ಅವಧಿಯಲ್ಲಿ ಆಂಧ್ರದಲ್ಲಿ ಈ ಪ್ರಮಾಣ ಶೇ.15ರಿಂದ 20ರಷ್ಟಿತ್ತು ಎಂದು ಚೆನ್ನೈನಲ್ಲಿ ಅಮೆರಿಕ ರಾಯಭಾರಿಯಾಗಿದ್ದ ಡೇವಿಡ್ ಹೂಪರ್ ಸಂದೇಶ ರವಾನಿಸಿದ್ದರು ಎನ್ನಲಾಗಿದೆ.
ಎಲ್ಲಿಯವರೆಗೆ ಕಾಂಗ್ರೆಸ್ ಸಂಪತ್ತನ್ನು ಹಂಚುತ್ತಾ ಹೋಗುತ್ತದೆಯೋ ಅಲ್ಲಿಯವರೆಗೆ ರಾಜ್ಯದಲ್ಲಿ ಭ್ರಷ್ಟಾಚಾರ ಬೆಳೆಯುತ್ತಲೇ ಹೋಗುತ್ತದೆ. ರಾಜ್ಯ ಸರ್ಕಾರ ಸಣ್ಣ ಸರ್ಕಾರಿ ಗುತ್ತಿಗೆಗಳನ್ನು ಪಕ್ಷದ ಕಾರ್ಯಕರ್ತರಿಗೆ ನೀಡುವ ಮೂಲಕ ಅವರನ್ನು ಸಂತೃಪ್ತರನ್ನಾಗಿ ಮಾಡುವ ಕೆಲಸ ಮಾಡುತ್ತಿದೆ ಎಂಬ ಆಘಾತಕಾರಿ ಅಂಶವೂ ಹೂಪರ್ ಸಂದೇಶದಲ್ಲಿದೆ.












Click it and Unblock the Notifications