ಹೆಬ್ರಿ ASI ವಸಂತ ಸಾವಿಗೆ ಕುರು ಕಾರಣವೇ?

ಬ್ರಹ್ಮಾವರದ ಹಂದಾಡಿ ಮೂಲದ ವಸಂತ(48)ನಾಪತ್ತೆಯಾದವರು. ಶಂಕರ ನಾರಾಯಣ ಠಾಣೆಯಿಂದ ಬಡ್ತಿ ಪಡೆದು ಏಳೆಂಟು ತಿಂಗಳ ಹಿಂದೆ ಹೆಬ್ರಿ ಠಾಣೆಗೆ ವರ್ಗಾವಣೆಯಾಗಿ ಬಂದಿ ಬಂದಿದ್ದರು.
ಸೋಮವಾರ ರಾತ್ರಿ ಸ್ಟೇಷನ್ ನಿಂದ ಮನೆಗೆಂದು ಹೊರಟವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು. ನಕ್ಸಲ ಬಾಧಿತ ಪ್ರದೇಶದಲ್ಲಿ ವಸಂತ ಅವರ ಕಣ್ಮರೆಗೆ ನಾನಾ ಕಾರಣಗಳು ಕಾಣಿಸತೊಡಗಿದ್ದವು.
ಅನಾರೋಗ್ಯ ಕಾರಣವೇ?: ಇತ್ತೀಚೆಗೆ ಆಸನದಲ್ಲಿ ಕುರು ಎದ್ದಿದ್ದಕ್ಕೆ ಸರ್ಜರಿ ಮಾಡಿಸಿಕೊಂಡು, ಸುಧಾರಿಸಿಕೊಳ್ಳುತ್ತಿದ್ದರು. ಆದರೆ, ಆಗಾಗ್ಗೆ ನೋವಿನಿಂದ ಬಳಲುತ್ತಿದ್ದರು ಎಂದು ವಸಂತ್ ಅವರ ಪತ್ನಿ ಹೇಳುತ್ತಾರೆ.
ಸೋಮವಾರ(ಸೆ.12) ರಾತ್ರಿ 12 ರ ಸುಮಾರಿಗೆ ಸ್ಟೇಷನ್ ನಿಂದ ಒಂದೂವರೆ ಕಿ.ಮೀ ದೂರದಲ್ಲಿರುವ ವಸತಿಗೃಹಕ್ಕೆ ನಡೆದುಕೊಂಡು ಹೊರಟ ವಸಂತ್ ಕಣ್ಮರೆಯಾಗಿದ್ದರು.
ಎರಡು ದಿನಗಳ ಯಾವುದೇ ಸುದ್ದಿಯಿರಲಿಲ್ಲ. ಆದರೆ, ಈಗ ಸಮೀಪದ ಕೆರೆಯಲ್ಲಿ ಅವರ ಶವ ಪತ್ತೆಯಾಗಿದ್ದು, ಸಾವಿಗೆ ನಿಜ ಕಾರಣ ಏನು? ಎರಡು ದಿನ ಎಲ್ಲಿದ್ದರು ಎಂಬ ಪ್ರಶ್ನೆ ಹೊತ್ತು ಹೆಬ್ರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications