ಶ್ರೀಲಂಕಾ ಗಾಳಿಪಟ ಉತ್ಸವಕ್ಕೆ ಟೀಂ ಮಂಗಳೂರು
ಮಂಗಳೂರು,
ಸೆ.13 : ಮಂಗಳೂರಿನ ಟೀಂ ಮಂಗಳೂರು' ತಂಡ ಶ್ರೀಲಂಕಾದಲ್ಲಿ ನಡೆಯಲಿರುವ ದ್ವೀಪರಾಷ್ಟ್ರಗಳ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲಿದೆ. ಸೆಪ್ಟೆಂಬರ್ 17 ಮತ್ತು 18ರಂದು ಜರುಗಲಿರುವ ಈ ಗಾಳಿಪಟ ಉತ್ಸವದಲ್ಲಿ ಈ ತಂಡ ಭಾರತವನ್ನು ಪ್ರತಿನಿಧಿಸಲಿದೆ. id="toptextpromo">ಸರ್ವೇಶ್
ರಾವ್, ದಿನೇಶ್ ಹೊಳ್ಳ, ಬಿ.ಸತೀಶ್ ರಾವ್ ಮತ್ತು ಶಂಕರ್ ಶೆಟ್ಟಿ ತಂಡದಲ್ಲಿರುತ್ತಾರೆ. ಈಗಾಲೇ ಅನೇಕ ದೇಶಗಳಲ್ಲಿ ಟೀಂ ಮಂಗಳೂರು ಗಾಳಿಪಟ ಉತ್ಸವಗಳಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದುಕೊಂಡಿದೆ. ಶ್ರೀಲಂಕಾದ ನೆಬೊಂಬೊ ಬೀಚ್ ಪಾರ್ಕ್ ನಲ್ಲಿ ಈ ಉತ್ಸವ ನಡೆಯಲಿದೆ. id='are-slot-1' class='oiad oi-axt oiadv'> id='top-searched-articles'>ಈ
ಉತ್ಸವದಲ್ಲಿ ಭಾರತ ಸಂಸ್ಕೃತಿಯನ್ನು ಬಿಂಬಿಸುವ ಪುಷ್ಪಕ ವಿಮಾನ, ಕಥಕ್ಕಳಿ, ಪಕ್ಷಿ, ಯಕ್ಷಗಾನ ಮುಂತಾದ ವಿನೂತನ ಗಾಳಿಪಟಗಳನ್ನು ಟೀಂ ಮಂಗಳೂರು ಹಾರಿಸಲಿದೆ. ಟೀಂ ಮಂಗಳೂರು ಗಾಳಿಪಟವನ್ನು ಮಾತ್ರವಲ್ಲ ಆಗಸದಲ್ಲಿ ಭಾರತದ ತ್ರಿವರ್ಣ ಧ್ವಜವನ್ನೂ ಹಾರಿಸಲಿ ಎಂದು ಹಾರೈಸಿ.











Click it and Unblock the Notifications