ಅತ್ಯಾಚಾರದಿಂದ ಬಚಾವಾದ್ರೂ ಹಳ್ಳಕ್ಕೆ ಹಾರಿದ ಯುವತಿ
ತುಮಕೂರು,
ಸೆ.11: ಪರಿಚಯಸ್ಥನೊಬ್ಬ ನಡೆಸಿದ ಅತ್ಯಾಚಾರ ಯತ್ನವನ್ನು ಎದುರಿಸಿ ಧೈರ್ಯವಾಗಿ ತಪ್ಪಿಸಿಕೊಂಡಿದ್ದ ಯುವತಿ, ನಂತರ ಯಾಕೋ ಬೇಸರಗೊಂಡು ಹಳ್ಳಕ್ಕೆ ಹಾರಿ ಸಾವಿಗೆ ಶರಣಾಗಿದ್ದಾಳೆ. id="toptextpromo">ಮನೆಯಲ್ಲಿ
ಯಾರೂ ಇಲ್ಲದ ವೇಳೆ ದಾಕ್ಷಾಯಿಣಿ ಮೇಲೆ ಬಾಲರಾಜು ಅತ್ಯಾಚಾರಕ್ಕೆ ಯತ್ನಿಸಿದ್ದ. ಆದರೆ, ಬಾಲರಾಜು ಯತ್ನ ವಿಫಲವಾಗಿತ್ತು, ಈ ವಿಷಯ ಗುಲ್ಲಾದರೆ ಕಷ್ಟ ಎಂದು ಹೆದರಿ ಓಡಿದ್ದ. ಚಿಕ್ಕ ನಾಯಕನಹಳ್ಳಿ ಬಡಿಕೆಗುಡ್ಲು ಗ್ರಾಮದಲ್ಲಿ ಈ ಘಟನೆ ಬಗ್ಗೆ ಸುದ್ದಿ ಹಬ್ಬುವ ಮೊದಲೇ ದಾಕ್ಷಾಯಿಣಿ ಸಾವನ್ನಪ್ಪಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಬಡಿಕೆಗುಡ್ಲು
ಗ್ರಾಮದ ದಾಕ್ಷಾಯಿಣಿ (19) ಆತ್ಮಹತ್ಯೆಗೆ ಬಾಲರಾಜು ಕಾರಣ ಎಂದು ಆಕೆಯ ಸಂಬಂಧಿಕರು ಹುಳಿಯಾರು ಪೊಲೀಸ್ ಠಾಣೆಗೆ ದೂರಿತ್ತಿದ್ದಾರೆ. ಆತ್ಮಹತ್ಯೆ ಕೇಸ್ ದಾಖಲಿಸಿಕೊಳ್ಳಲು ಬಂದಿದ್ದ ಪೊಲೀಸರು, ಈಗ ಆರೋಪಿ ಬಾಲರಾಜು ಹುಡುಕತೊಡಗಿದ್ದಾರೆ. ಬಾಲರಾಜು ಸಿಕ್ಕ ಮೇಲೆ ದಾಕ್ಷಾಯಿಣಿ ಮೇಲೆ ಅತ್ಯಾಚಾರ ನಡೆಯಿತೋ? ಇಲ್ಲವೋ? ದಾಕ್ಷಾಯಿಣಿ ಸಾಯಲು ನಿಜ ಕಾರಣ ಏನು ಎಂಬುದು ಸ್ಪಷ್ಟವಾಗಲಿದೆ.











Click it and Unblock the Notifications