ವಾಸ್ತು ದೋಷ ನಿವಾರಣೆಗೆ ರೆಡ್ಡಿ ಮನೆ ಗೇಟ್ ಬಲಿ

Vastu correction for Reddy's house
ಬಳ್ಳಾರಿ, ಸೆ. 10 : ಹೋಮ - ಹವನ, ದೃಷ್ಟಿದೋಷ ನಿವಾರಣೆ ಮುಗಿಯಿತು. ಈಗ, ಮನೆಯ ವಾಸ್ತು ದೋಷ ನಿವಾರಣೆ. ಜಿ. ಜನಾರ್ದನರೆಡ್ಡಿ ಅವರನ್ನು ಸಿಬಿಐ ಬಂಧಿಸಿದ ನಂತರ ಅವರ ಮನೆಯಲ್ಲಿ ಒಂದಿಲ್ಲ ಒಂದು ಧಾರ್ಮಿಕ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಸೋಮವಾರ, ಮಂಗಳವಾರ ಮತ್ತು ಬುಧವಾರ ವಿವಿಧ ಹೋಮಗಳು ನಡೆದಿವೆ. ಗುರುವಾರ ಮನೆಗೆ ದೃಷ್ಟಿದೋಷ ನಿವಾರಣೆ ಮಾಡಲಾಗಿದೆ. ಶನಿವಾರ ಬೆಳಗ್ಗೆಯಿಂದ ವಾಸ್ತುದೋಷ ನಿವಾರಣೆಗಾಗಿ ಕಾಮಗಾರಿ ಚಾಲ್ತಿಯಲ್ಲಿವೆ.

ಅತ್ಯಂತ ವಿಶಾಲವಾದ ಪ್ರಾಂಗಣದ ಪೂರ್ವದಿಕ್ಕಿಗೆ ತಲಬಾಗಿಲನ್ನು ಹೊಂದಿರುವ ರೆಡ್ಡಿಯ ಮನೆಯಲ್ಲಿ ವಾಸ್ತು ಅಕ್ಷರಶಃ ಪಾಲನೆ ಆಗುತ್ತಿದೆ. ಮನೆಯ ಒಟ್ಟು ಆವರಣಕ್ಕೆ 2 ಗೇಟುಗಳಿವೆ. ಇವುಗಳಲ್ಲಿ ಒಂದು ರೆಡ್ಡಿ ವಾಸವಿರುವ ಮನೆಯ ಒಳ - ಹೊರಗಡೆಗೆ ತಿರುಗಾಡಲು ಇರುವ ಮುಖ್ಯದ್ವಾರ. ಇನ್ನೊಂದು ಕುಟೀರ ಪ್ರವೇಶಕ್ಕಾಗಿ ಆವರಣದ ಇನ್ನೊಂದು ಕೊನೆಯ ಈಶಾನ್ಯಕ್ಕೆ ಮತ್ತೊಂದು ಗೇಟಿದೆ.

ಜನಾರ್ದನ ರೆಡ್ಡಿ ಮನೆಗೆ ನೈರುತ್ಯದಲ್ಲಿ ನಿಸರ್ಗದತ್ತವಾದ ಕಲ್ಲಿನಗುಡ್ಡವಿದೆ. ಮನೆಯ ನೈರುತ್ಯಕ್ಕೆ ಎತ್ತರಕ್ಕೆಕ್ಕೆ ಕೋಣೆಯನ್ನು ನಿರ್ಮಿಸಲಾಗಿದೆ. ಆದರೆ, ಸಾರ್ವಜನಿಕರು, ಬಿಜೆಪಿಯ ಸಾಮಾನ್ಯ ಪದಾಧಿಕಾರಿಗಳು - ಮುಖಂಡರು, ಅಧಿಕಾರಿಗಳು ರೆಡ್ಡಿಯನ್ನು ಭೇಟಿ ಮಾಡಲಿಕ್ಕಾಗಿರುವ ಪ್ರತ್ಯೇಕ ಐಷಾರಾಮಿ ಹವಾನಿಯಂತ್ರಿತ ಟೀಕ್‌ವುಡ್‌ನ ಕುಟೀರ ಪ್ರವೇಶಕ್ಕಾಗಿ ಆವರಣದ ಮುಂದಿನ ಸ್ಥಳದ ಕೊನೆಯ ಭಾಗದಲ್ಲಿ ಪ್ರತ್ಯೇಕ ಗೇಟ್ ಇದೆ.

ಸಿಬಿಐ ದಾಳಿಯ ನಂತರ ಕಂಗೆಟ್ಟಿರುವ ಅವರ ಆಪ್ತರು - ಕುಟುಂಬದ ಸದಸ್ಯರು ರೆಡ್ಡಿ ಮನೆಯ ವಾಸ್ತುದೋಷ ನಿವಾರಣೆಗಾಗಿ ಪಂಡಿತರನ್ನು ಆಹ್ವಾನಿಸಿ ಈಶಾನ್ಯಗೇಟ್ ಮಾತ್ರವೇ ಉಳಿಸಿಕೊಂಡು ರಾಜಮಾರ್ಗದ ಮುಖ್ಯದ್ವಾರ ಮುಚ್ಚುವ ಸಲಹೆ ಪಡೆದ್ದಾರೆ. ಈ ಸಲಹೆ ಕೂಡಲೇ ಚಾಲ್ತಿಗೆ ಬಂದಿದೆ. ಶನಿವಾರ ಬೆಳಗ್ಗೆಯಿಂದಲೇ ಗೇಟ್ ಮುಚ್ಚುವ ಕಾಮಗಾರಿ 10ಕ್ಕೂ ಹೆಚ್ಚಿನ ಕೂಲಿಗಳಿಂದ ವೇಗವಾಗಿ ನಡೆದಿದೆ. ಮಣ್ಣಿನ ಕೆಂಪು ಇಟ್ಟಿಗೆ, ಸಿಮೆಂಟು ಹಾಕಿ 5-6 ಅಡಿ ಎತ್ತರದಲ್ಲಿ ಗೋಡೆ ನಿರ್ಮಾಣ ಆಗುತ್ತಿದೆ. ಈಶಾನ್ಯದ ಗೇಟ್‌ನೇ ಇನ್ನುಮುಂದೆ ಮುಖ್ಯಗೇಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+