ಉಗ್ರರ ಮುಂದಿನ ಟಾರ್ಗೆಟ್ ಅಹ್ಮದಾಬಾದ್?

ಮೂರನೇ ಈಮೇಲನ್ನು ಸರಿಯಾಗಿ 4 ಗಂಟೆಗೆ ಪ್ರಾಕ್ಸಿ ಸರ್ವರ್ ಮುಖಾಂತರ ಕಳುಹಿಸಲಾಗಿದೆ. ಕಳುಹಿಸಲಾಗಿರುವುದು ಪಶ್ಚಿಮ ಬಂಗಾಳ ಎಂದು ಗುರುತಿಸಲಾಗಿದೆ. ಆದರೆ, ಐಪಿ ಅಡ್ರೆಸ್ಸನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. 13 ಜನರನ್ನು ಬಲಿಯಾಗಿ, 70 ಜನರಿಗೆ ಗಾಯವಾಗಿರುವ ಈ ಭೀಕರ ಘಟನೆಯ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಈಮೇಲ್ ನ ಅಧ್ಯಯನ ನಡೆಸಿದೆ.
ಈವರೆಗೆ ಒಟ್ಟು ಮೂರು ಈಮೇಲ್ ಗಳನ್ನು ಉಗ್ರರು ರವಾನಿಸಿದ್ದಾರೆ. ಮೊದಲನೇ ಈಮೇಲಿನಲ್ಲಿ ಹುಜಿ (HuJI) ಸ್ಫೋಟದ ಜವಾಬ್ದಾರಿ ಹೊತ್ತಿದ್ದರೆ, ಎರಡನೆಯ ಈಮೇಲನ್ನು ಇಂಡಿಯನ್ ಮುಜಾಹಿದ್ದಿನ್ (IM) ಕಳುಹಿಸಿದ್ದು, ಸ್ಫೋಟದ ಹೊಣೆಯನ್ನು ಹೊತ್ತಿದೆ.
ಈ ಹಿನ್ನೆಲೆಯಲ್ಲಿ ಗುಜರಾತಿನ ಅಹ್ಮದಾಬಾದಿನಲ್ಲಿ ಬಿಗಿ ಭದ್ರತೆ ವ್ಯವಸ್ಥೆ ಮಾಡಲು ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಆದೇಶಿಸಿದ್ದಾರೆ. ಜೊತೆಗೆ, ಇದರ ರಾಜ್ಯಗಳು ಕೂಡ ಕಟ್ಟೆಚ್ಚರಿಕೆಯಲ್ಲಿರಬೇಕೆಂದು ಹೇಳಿದ್ದಾರೆ. ಮುಂಬೈ ಮತ್ತು ಬೆಂಗಳೂರು ಭದ್ರತೆಯ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ.












Click it and Unblock the Notifications