ರೆಡ್ಡಿ ಪರ ವಾದಕ್ಕೆ ಹೈದರಾಬಾದಿಗೆ ಸಿವಿ ನಾಗೇಶ್!

ಬೆಂಗಳೂರು, ಸೆ. 8: ಚಂಚಲಗೂಡ ಜೈಲಿನ ವಿಚಾರಣಾಧೀನ ಕೈದಿ ನಂಬರ್ 697 ಅಲಿಯಾಸ್ ಜನಾರ್ದನ ರೆಡ್ಡಿ ಪರ ವಾದಕ್ಕೆ ಖ್ಯಾತ ಲಾಯರ್ ಸಿವಿ ನಾಗೇಶ್ ಹೈದರಾಬಾದಿಗೆ ಧಾವಿಸಿದ್ದಾರೆ. ಇದೀಗ ಗಾಲಿ ರೆಡ್ಡಿ ಅವರಿಗೆ ಜಾಮೀನು ನೀಡಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸುತ್ತಿದ್ದಾರೆ.

ಲಾಯರ್ ಸಿವಿ ನಾಗೇಶ್ ಅವರಿಗೆ ಕರ್ನಾಟಕದಲ್ಲಿ ದೊಡ್ಡ ಹೆಸರಿದೆ. ಅತ್ಯಂತ ಪ್ರತಿಷ್ಠಿತ, ಮಹತ್ವದ ಕೇಸುಗಳಲ್ಲಿ ಅವರು ತಮ್ಮ ಕಕ್ಷಿದಾರರ ಪರ ಬಡಿದಾಡಿದ್ದಾರೆ. ಹಾಗೆಯೇ ಅನೇಕ ಪ್ರಕರಣಗಳಲ್ಲಿ ಯಶಸ್ಸೂ ಅವರಿಗೆ ಸಂದಿದೆ. ಇತ್ತೀಚೆಗೆ ಅವರು ಕಟ್ಟಾ ಪರವೂ ಕಟಕಟೆಯ ಸಮೀಪ ಕಾಲೂರಿ ವಾದಕ್ಕೆ ನಿಂತಿದ್ದಾರೆ.

ಖ್ಯಾತ ನಾಮರ ಪರ ಘಟಾನುಘಟಿ ಲಾಯರುಗಳು ಬಡಿದಾಡುತ್ತಿರುವುದರಿಂದ ಪ್ರಕರಣಗಳಲ್ಲಿ ಕುತೂಹಲ ಹೆಚ್ಚಾಗಿದೆ. ಇದು ಅಂತಿಮವಾಗಿ ಆರೋಪಿ-ದೂರುದಾರರ ನಡುವಣ ಬಡಿದಾಟ ಎನಿಸಿದರೂ ಒಂದು ರೀತಿ ಈ ಲಾಯರುಗಳ ನಡುವಣ ಪ್ರತಿಷ್ಠೆಯ ಕಾದಾಟವೂ ಆಗಿ ಗೋಚರಿಸುತ್ತಿದೆ.

ಮೊನ್ನೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿಯೂ ಸಿವಿ ನಾಗೇಶರೇ ವಾದ ಮಂಡಿಸುತ್ತಿದ್ದಾರೆ. ಸಿರಾಜುದ್ದೀನ್ ಪಾಶಾ ಪರವಾಗಿ ದಮ್ಮಯ್ಯ ಎಂದರೂ ಮತ್ತೊಬ್ಬ ಘಟಾನುಘಟಿ ಲಾಯರ್ ಸಿ. ಎಚ್. ಹನುಮಂತರಾಯ ವಾದ ಮಂಡಿಸಬಾರದು ಎಂದು ಅವರು ತಮ್ಮ ವಾದ ಸರಣಿಯನ್ನು ಮುಂದಿಟ್ಟಿದ್ದಾರೆ. ಇದನ್ನು ಪ್ರತಿಷ್ಠಯಾಗಿ ತೆಗೆದುಕೊಂಡಿರುವ ಹನುಮಂತರಾಯರು ಅಂತಿಮ ನಗೆ ತಮ್ಮದೇ ಎಂದಿದ್ದಾರೆ. ಜನಕ್ಕೂ ಇದೊಂದು ರೀತಿ ಡಬಲ್ ಕುತೂಹಲವಾಗಿ ಗೋಚರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+