ಕಾಂಗ್ರೆಸ್ ಯುವರಾಜ ರಾಹುಲ್ ಗೆ ಮುಖಭಂಗ
ನವದೆಹಲಿ, ಸೆ.9: ದೆಹಲಿ ಹೈಕೋರ್ಟ್ ಬಳಿ ಬುಧವಾರ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ತುತ್ತಾಗಿ ಗಾಯಗೊಂಡವರನ್ನು ಕಾಣಲು ಹೋದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಗೆ ಭಾರಿ ಮುಖಭಂಗವಾಗಿದೆ.
ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತರನ್ನು ನೋಡಲು ತನ್ನ ಪರಿವಾರದೊಡನೆ ಬಂದ ರಾಹುಲ್ ಗಾಂಧಿಗೆ ಬೈಗುಳದ ಸ್ವಾಗತ ದೊರೆತಿದೆ. ಗಾಯಗೊಂಡವರ ಕುಟುಂಬದವರು ರಾಹುಲ್ ವಿರುದ್ಧ ಘೋಷಣೆ ಕೂಗುತ್ತಾ, ರಾಹುಲ್ ಬಂದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.[ವಿಡಿಯೋ ನೋಡಿ]
ರಾಜಕಾರಣಿಗಳಿಗೆ ಸಾರ್ವಜನಿಕರ ನೋವಿನ ಅರಿವಿಲ್ಲ. ಸುಮ್ಮನೆ ಇಲ್ಲಿ ಬಂದು ಫೋಸ್ ಕೊಡೋದು ಬೇಡ. ನಮ್ಮ ನೋವು ನಮಗಿರಲಿ. ಆಸ್ಪತ್ರೆಗೆ ರಾಜಕಾರಣಿಗಳ ಪ್ರವೇಶ ನಿಷೇಧಗೊಳಿಸಬೇಕು ಎಂದು ಘಟನೆಯಲ್ಲಿ ಗಾಯಗೊಂಡ ತರುಣ್(30) ಸಂಬಂಧಿ ಮೀನಾ ಎಂಬುವವರು ಕೂಗಾಡಿದ್ದಾರೆ.
ಹೈಕೋರ್ಟ್ ಗೆ ಸರಿಯಾದ ಭದ್ರತೆ ಒದಗಿಸದ ಸರ್ಕಾರ, ಮೊದಲು ಸುರಕ್ಷತೆಯ ಬಗ್ಗೆ ಯೋಚಿಸಲಿ, ಇಲ್ಲಿ ಬಂದು ಮೊಸಳೆ ಕಣ್ಣೀರು ಸುರಿಸುವುದು ಬೇಡ ಎಂದು ಕೈಲಾಶ್ ಎಂಬುವರು ಆಕ್ರೋಶ ವ್ಯಕ್ತಪಡಿಸಿದರು.
ಈ ಬೈಗುಳಗಳ ಸುರಿಮಳೆ ನಡುವೆ ರಾಹುಲ್ ಗಾಂಧಿ, ತುರ್ತು ಸೇವಾ ಘಟಕಕ್ಕೆ ಭೇಟಿ ನೀಡಿ ವೈದ್ಯರೊಡನೆ ಸಮಾಲೋಚನೆ ನಡೆಸಿ ಹೊರಬಿದ್ದರು. ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿರುವ ರಾಹುಲ್ ಗೆ ಆಸ್ಪತ್ರೆಯಲ್ಲಿದ್ದ 20 ನಿಮಿಷದ ಕರಾಳ ನೆನಪು ಕಾಡದೇ ಬಿಡದು.












Click it and Unblock the Notifications