ದೆಹಲಿಯಲ್ಲಿ ಸ್ಫೋಟ : ಮೈಸೂರಿನಲ್ಲಿ ಬಿಗಿ ಭದ್ರತೆ

ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಕೆಆರ್‌ಎಸ್ ಸೇರಿದಂತೆ ನಗರದ ನ್ಯಾಯಾಲಯ, ಅರಮನೆ, ಚಾಮುಂಡಿಬೆಟ್ಟ, ಮೃಗಾಲಯ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಜನಸಂದಣಿಯಿರುವ ಸ್ಥಳಗಳಲ್ಲಿ ಶಸ್ತ್ರಸಜ್ಜಿತ ಕೆಎಸ್‌ಆರ್‌ಪಿ, ನಗರ ಸಶಸ್ತ್ರ ಮೀಸಲುಪಡೆ, ಕಮಾಂಡೋ ಪಡೆಯನ್ನು ನಿಯೋಜಿಸಲಾಗಿದೆ.
ಅಲ್ಲದೆ ನಗರದಾದ್ಯಂತ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ತಪಾಸಣೆ ನಡೆಯುತ್ತಿದೆ. ಮಧ್ಯರಾತ್ರಿಯಲ್ಲಿ ತೆರಳುವ ವಾಹನಗಳ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದ್ದು, ಅಂತಹ ವಾಹನಗಳ ತಪಾಸಣೆ ಕಡ್ಡಾಯವಾಗಿದೆ. ವಾಹನ ಚಾಲಿಸುವವರ ವಿವರ, ವಿಳಾಸ, ರಾತ್ರಿಯಲ್ಲಿ ತೆರಳುತ್ತಿರುವ ಕಾರಣವನ್ನು ಕೂಡ ನೀಡಬೇಕಾಗುತ್ತದೆ.
ನಾಗರಿಕರ ಸುರಕ್ಷತೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಯಾವುದೇ ಆತಂಕ ಬೇಡ ಎಂಬುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications