ರೆಡ್ಡಿಗೆ ಜೈಲಿನಲ್ಲಿ ಮತ್ತೊಂದು ದಿನ ನಿದ್ರಾರಹಿತ ರಾತ್ರಿ

ಚಂಚಲಗುಡ ಜೈಲಿನಲ್ಲಿ ಖೈದಿ ನಂ. 697 ಆಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸಹ ಆರೋಪಿ ಖೈದಿ ನಂ. 696 ಜತೆ ಒಂದೇ ಸೆಲ್ ನಲ್ಲಿ ನಿದ್ರೆ ರಹಿತಾ ರಾತ್ರಿಯನ್ನು ಕಳೆಯಬೇಕಿದೆ.
ಕ್ರಿಮಿನಲ್ ಸಂಚು ಆರೋಪವೊಂದನ್ನು ಬಿಟ್ಟರೆ ಉಳಿದೆಲ್ಲ ಆರೋಪಗಳಿಗೂ ಜಾಮೀನು ಮಂಜೂರು ಮಾಡುವ ಅವಕಾಶವಿರುತ್ತದೆ. ಆದರೆ, ಸಿಬಿಐ ವಿಚಾರಣೆಗಾಗಿ ಆರೋಪಿಗಳನ್ನು ತಮ್ಮ ವಶಕ್ಕೆ ವಹಿಸಬೇಕು ಎಂದು ಮನವಿ ಸಲ್ಲಿಸಿದರೆ, ರೆಡ್ಡಿಗಳಿಗೆ ಇನ್ನಷ್ಟು ಕಷ್ಟ ಎದುರಾಗುತ್ತದೆ.
ಕೋರ್ಟ್ ಮೊದಲಿಗೆ ಯಾರ ವಶಕ್ಕೆ ರೆಡ್ಡಿಗಳನ್ನು ಕೊಡಬೇಕು ಎಂದು ನಿರ್ಣಯ ನೀಡಲಿದ್ದು, ಆಮೇಲೆ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.
ಸದ್ಯಕ್ಕೆ ಸಾಮಾನ್ಯ ಖೈದಿ: ಜಾಮೀನು ಸಿಗುವ ನಿರೀಕ್ಷೆಯಲ್ಲಿರುವ ಜನಾರ್ದನ ರೆಡ್ಡಿ ಅವರು ಜೈಲಿನಲ್ಲಿ ವಿಶೇಷ ಸೌಲಭ್ಯಗಳಿಗೆ ಇನ್ನೂ ಮನವಿ ಸಲ್ಲಿಸಿಲ್ಲ.
ನಿಯಮದ ಪ್ರಕಾರ 600 ಗ್ರಾಂ ಅನ್ನ, 100 ಗ್ರಾಂ ದಾಲ್ ಹಾಗೂ 250 ಗ್ರಾಂ ತರಕಾರಿ ಸಾಂಬಾರ್ ಅನ್ನು ವಿಚಾರಾಧೀನ ಖೈದಿಗಳಿಗೆ ನೀಡಲಾಗುತ್ತಿದೆ.
ಸತ್ಯಂ ಮಾಜಿ ಸಿಇಒ ರಾಮಲಿಂಗ ರಾಜು ಅವರಂತೆ ರೆಡ್ಡಿಗಳು ಕೂಡಾ ಸ್ಪೆಷಲ್ ಕ್ಲಾಸ್ ಟ್ರೀಟ್ ಮೆಂಟ್ ಗೆ ಮನವಿ ಸಲ್ಲಿಸಬಹುದು ಎಂದು ಚಂಚಲಗುಡ ಜೈಲಿನ ವಾರ್ಡನ್ ಹೇಳಿದ್ದಾರೆ.












Click it and Unblock the Notifications