ತಿರುಪತಿ ತಿಮ್ಮಪ್ಪ ತಲೆಯಿಂದ ರೆಡ್ಡಿ ಕಿರೀಟ ಕೆಳಗಿಳಿಸಿ

ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಸೋಮವಾರ ಜನಾರ್ದನ ರೆಡ್ಡಿ ಬಂಧನವಾಗಿ ಚಂಚಲಗುಡ ಜೈಲಿಗೆ ಸೇರಿದ ಮೇಲೆ ಈ ರೀತಿ ಬೇಡಿಕೆ ಶುರುವಾಗಿದೆ.
ಮಂಗಳವಾರ ಭಕ್ತರ ಸಮೂಹ ಟಿಟಿಡಿ ಅಧಿಕಾರಿಗಳನ್ನು ಬೇಟಿ ಮಾಡಿ, ಜನಾರ್ದನ ರೆಡ್ದಿ ಅವರು ನೀಡಿದ 30 ಕೆ.ಜಿ ತೂಗುವ 45 ಕೋಟಿ ರುಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ತಿರುಪತಿ ತಿಮ್ಮಪ್ಪನ ಮುಡಿಗೇರಿಸುವುದು ಬೇಡ.
ಅಕ್ರಮ ಹಣದಿಂದ ಬಂದ ದುಡ್ಡನಿಂದ ಹರಕೆ ತೀರಿಸಿಕೊಂಡಿರುವ ರೆಡ್ಡಿಗಳ ಕಿರೀಟದಿಂದ ದೇವರು ಅಪವಿತ್ರರಾಗುತ್ತಾರೆ ಎಂದು ಭಕ್ತ ಸಮೂಹ ಆಗ್ರಹಿಸಿದೆ.
ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ನಿರ್ಮಿಸುತ್ತಿರುವ ಬ್ರಹ್ಮಿಣಿ ಸ್ಟೀಲ್ ಕೈಗಾರಿಕೆಗೆ ಯಶಸ್ಸು ದೊರೆಯಲಿ ಎಂಬ ಉದ್ದೇಶದಿಂದ ತಿಮ್ಮಪ್ಪನಿಗೆ 2009ರ ಜೂನ್ 11ರಂದು ವಜ್ರ ಖಚಿತ ಕಿರೀಟವನ್ನು ಅರ್ಪಿಸಿದ್ದರು. ತಿಮ್ಮಪ್ಪನ ಬಳಿ ಇರುವ 7 ಕಿರೀಟದ ಜೊತೆಗೆ ರೆಡ್ಡಿಗಳ ಕಿರೀಟ ಕೂಡಾ ಸೇರಿಕೊಂಡಿತ್ತು.












Click it and Unblock the Notifications