ಜಯಲಲಿತಾ ಬೆಂಗಳೂರು ಕೋರ್ಟಿಗೆ ಬರಲೇಬೇಕು

jayalalitha-sc-appear-in-bangalore-trial-court
ನವದೆಹಲಿ, ಸೆ.6: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಕರ್ನಾಟಕದ ವಿಶೇಷ ನ್ಯಾಯಾಲಯ ಮುಂದೆ ಹಾಜರಾಗಲೇಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ. ಪ್ರಕರಣದ ನಿಷ್ಪಕ್ಷಪಾತ ವಿಚಾರಣೆಗಾಗಿ ಪ್ರಕರಣವನ್ನು ಕರ್ನಾಟಕದ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

ನ್ಯಾಯಾಲಯಗಳು ಭ್ರಷ್ಟರಿಗೆ ನಡುಕವುಂಟುಮಾಡಿರುವ ಈ ಹೊತ್ತಿನಲ್ಲಿ 'ಕೋರ್ಟಿಗೆ ಬಂದವಳು ಜೈಲಿಗೆ ಬರದೀರಾ ಇರ್ತಾಳಾ' ಎಂದು ಜಯಕ್ಕ ಜೈಲಿಗೆ ಹೋದರೆ ತಮಿಳುನಾಡಿನ ಗತಿಯೇನು?

ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಜಯಲಲಿತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದಲ್ವೀರ್ ಭಂಡಾರಿ ಮತ್ತು ದೀಪಕ್ ವರ್ಮಾ ಅವರ ನ್ಯಾಯಪೀಠ, 'ಖುದ್ದು ಹಾಜರಿಗೆ ವಿನಾಯಿತಿ ಕೋರಿ ಅರ್ಜಿ ಸಲ್ಲಿಸುವ ಮೂಲಕ ಜಯಲಲಿತಾ ವಿಚಾರಣೆ ಪ್ರಕ್ರಿಯೆಯನ್ನು ವಿಳಂಬ ಮಾಡಲು ಯತ್ನಿಸುತ್ತಿದ್ದಾರೆ' ಎಂದು ಗಂಭೀರವಾಯಿತು.

'ನಾವು ವಿಶಾಲವಾದ ತಳಹದಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದೇವೆ. ಅಂದ ಮಾತಕ್ಕೆ ಆರೋಪಿ ಹೇಳುವ ಮಾತುಗಳನ್ನೆಲ್ಲಾ ಪರಿಗಣಿಸುವ ಅಗತ್ಯವಿಲ್ಲ. ವಿಚಾರಣೆ ಪ್ರಕ್ರಿಯೆಯನ್ನು ವಿಳಂಬ ಮಾಡುವ ಉದ್ದೇಶ ಬಿಟ್ಟರೆ ಈ ಅರ್ಜಿಯಲ್ಲಿ ಬೇರೇನೂ ಕಾಣುತ್ತಿಲ್ಲ' ಎಂದು ಭಂಡಾರಿ ಅಭಿಪ್ರಾಯಪಟ್ಟರು.

ವಿಚಾರಣೆ ನಡೆಯುತ್ತಿರುವ ಕರ್ನಾಟಕದ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಲು ಜಯಲಲಿತಾ ಅವರಿಗೆ ಯಾವಾಗ ಸಾಧ್ಯವಾಗಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಲು ಜಯಾ ಪರ ವಕೀಲ ಹರೀಶ್ ಸಾಳ್ವೆಗೆ ಒಂದು ವಾರ ಕಾಲಾವಕಾಶ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿದೆ.

ಮಿತಿ ಮೀರಿದ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಜಯಲಲಿತಾ ಅವರು ಸಿಆರ್‌ಪಿಸಿ ಸೆಕ್ಷನ್ 313ರಡಿ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.

ಅಗತ್ಯಬಿದ್ದರೆ, ಜಯಲಲಿತಾ ಸುರಕ್ಷತೆಗಾಗಿ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲು ವಿಚಾರಣಾ ಕೋರ್ಟ್‌ಗೆ ಸೂಚಿಸುವುದಾಗಿಯೂ ನ್ಯಾಯಪೀಠ ಹೇಳಿತು.1991-96ರ ಅವಧಿಯಲ್ಲಿ ಜಯಲಿಲಿತಾ ಅವರು ಅಕ್ರಮವಾಗಿ 66 ಕೋಟಿ ಮೌಲ್ಯದ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+