ಮಹಿಳೆ ಮೇಲೆ ಹಲ್ಲೆ, ಹಾಸನ ಪೇದೆ ನ್ಯಾಯಾಂಗ ಬಂಧನ

ಪೊಲೀಸ್ ಪೇದೆ ಲೋಕೇಶ್ ಅಡ್ಲಿಮನೆ ರಸ್ತೆಯಲ್ಲಿ ವಾಸವಾಗಿರುವ ಗಾಯಿತ್ರಿ ಅವರ ನಿವಾಸಕ್ಕೆ ನುಗ್ಗಿ ಹಲ್ಲೆ ನಡೆಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠ ಅಮಿತ್ ಸಿಂಗ್ ಸೂಚನೆಯ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಲೋಕೇಶ ಅವರನ್ನು ಜೈಲಿಗೆ ಅಟ್ಟಿದ್ದಾರೆ.
ಜಗಳ ಗಂಟ ಪೇದೆ : ಪೊಲೀಸ್ ಪೇದೆ ಲೋಕೇಶನ ವಿರುದ್ಧ ಕಿಕ್ಕೇರಿ ಮತ್ತು ಮಂಡ್ಯದಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು. ಕಿಕ್ಕೇರಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಎಂದು ಹೆದರಿಸಿ ಸುಲಿಗೆ ಮಾಡಿರುವ ಆರೋಪವೂ ಈತನ ಮೇಲಿದೆ.
ಮಂಡ್ಯದಲ್ಲಿ ಬ್ರೇಕ್ ಇನ್ಸ್‌ಪೆಕ್ಟರ್ ಎಂದು ಹೇಳಿ ಬೇಸ್ತು ಬೀಳಿಸಿದ್ದನು.ಪೇದೆ ಲೋಕೇಶ್ ಮತ್ತು ಗಾಯಿತ್ರಿ ಅವರ ನಡುವಿನ ಹಣಕಾಸು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ತೀರ್ಮಾನವಾಗಿತ್ತು.
ಆಗ ಅಪರ ಪೊಲೀಸ್ ವರಿಷ್ಠಾಧಿಕಾರಿ ಯಲ್ಲಪ್ಪ ಅವರು ಲೋಕೇಶ್ ರಕ್ಷಣೆಗೆ ನಿಂತಿದ್ದರು. ತಮ್ಮ ಕೋಮಿಗೆ ಸೇರಿದ್ದರಿಂದ ಲೋಕೇಶ್‌ಗೆ ತಿಳುವಳಿಕೆ ಹೇಳಿ ಸಂಧಾನ ಮಾಡಲಾಗಿತ್ತು.
ಆದರೆ ಈತ ಪಾಠ ಕಲಿಯಲಿಲ್ಲ. ಆಗಿನ ಪೊಲೀಸ್ ವರಿಷ್ಠ ಶರತ್‌ಚಂದ್ರ ಕೂಡ ಲೋಕೇಶ್‌ಗೆ ಎಚ್ಚರಿಕೆ ನೀಡಿದ್ದರು. ಹೊಳೆನರಸೀಪುರ ಮತ್ತು ಹಾಸನ ನಗರ ಠಾಣೆಯಲ್ಲಿ ಇಬ್ಬರ ನಡುವಿನ ವ್ಯಾಜ್ಯವನ್ನು ತೀರ್ಮಾನಿಸಿ ತಿಳಿ ಹೇಳಲಾಗಿತ್ತು.
ಲೋಕೇಶ್ ಪುನಃ ತಗಾದೆ ತೆಗೆದು ಹಣಕ್ಕಾಗಿ ಗಾಯಿತ್ರಿ ಅವರನ್ನು ಒತ್ತಾಯಿಸುತ್ತಿದ್ದ. ಕೊನೆಗೂ ಆತನ ತಪ್ಪಿಗೆ ಸರಿಯಾದ ಶಿಕ್ಷೆಯಾಗಿದೆ ಎಂದು ಪೊಲೀಸರೇ ಚರ್ಚೆಯಲ್ಲಿ ತೊಡಗಿದ್ದಾರೆ.












Click it and Unblock the Notifications