ದೆಹಲಿಯಲ್ಲೇ ಸಿಬಿಐನಿಂದ ವೈಎಸ್ ಜಗನ್ ಬಂಧನ?

ಸದ್ಯ ದೆಹಲಿಯಲ್ಲಿರುವ ಕಡಪ ಸಂಸದ ಜಗನ್ ಅವರ ಮೇಲೆ ಚಾರ್ಚ್ ಶೀಟ್ ದಾಖಲಿಸಿದ ನಂತರ ಬಂಧಿಸುವ ಸಾಧ್ಯತೆಯಿದೆ. ಓಬಳಾಪುರಂ ಗಣಿಗಾರಿಕೆ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದಂತೆ ಜಗನ್ ಅವರನ್ನು ಬಂಧಿಸುವ ಸಾಧ್ಯತೆಯಿದೆ.
ವೈಎಸ್ ಜಗನ್ ಅವರ ತಂದೆ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರು ಸುಮಾರು 8-9 ವರ್ಷಗಳ ಹಿಂದೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗಡಿಭಾಗದಲ್ಲಿ ಗಣಿಗಾರಿಕೆ ನಡೆಸಲು ಬಳ್ಳಾರಿ ರೆಡ್ಡಿ ಸೋದರರಿಗೆ ಅನುಮತಿ ನೀಡಿದ್ದರು. ಇದಲ್ಲದೆ ಅನೇಕ ಕಂಪನಿಗಳಲ್ಲೂ ವೈಎಸ್ ಜಗನ್ ಹಾಗೂ ರೆಡ್ಡಿ ಸೋದರರ ಅನಧಿಕೃತ ಪಾಲುದಾರಿಕೆ ಇದೆ.
ವೈಎಸ್ ಜಗನ್ ಅವರ ಮೇಲೆ ಅಕ್ರಮ ಆಸ್ತಿ ಹೊಂದಿರುವ ಆರೋಪ ಹೊರೆಸಿ ಸಿಬಿಐ FIR ದಾಖಲಿಸಿದೆ.ಜಾರಿ ನಿರ್ದೇಶನಾಲಯ ಕೂಡಾ ಜಗನ್ ಹಿಂದೆ ಬಿದ್ದಿದೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ ತಮ್ಮ ಒಡೆತನದ ಸಾಕ್ಷಿ ಮಾಧ್ಯಮ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಜಗನ್ ರಾಜೀನಾಮೆ ನೀಡಿದ್ದಾರೆ. ಆದರೆ ಪತ್ನಿ ಭಾರತಿ ಅವರನ್ನು ಆ ಸ್ಥಾನದಲ್ಲಿ ಕೂರಿಸಿದ್ದಾರೆ.












Click it and Unblock the Notifications