ಭದ್ರಾವತಿಯಲ್ಲಿ ಭಾರೀ ಮಳೆ,ಮುಳುಗಿದ ಸೇತುವೆ

rain
ಭದ್ರಾವತಿ, ಸೆ. 2 : ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ ಮತ್ತು ಭದ್ರಾವತಿ ಪಟ್ಟಣಗಳು ಒದ್ದೆ-ಮುದ್ದೆಯಾಗಿದೆ.

ಭದ್ರಾವತಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು ನಗರದ ಮಧ್ಯ ಭಾಗದಲ್ಲಿರುವ ಭದ್ರಾ ನದಿ ಸೇತುವೆಯ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಈ ಮಳೆಯಲ್ಲಿ ಗೌರಿ ಗಣಪತಿ ಹಬ್ಬ ಅದು ಹೇಗೆ ಮಾಡಿದೆವೋ ದೇವರಿಗೇ ಗೊತ್ತು ಎನ್ನುತ್ತಾರೆ ಪೇಪರ್ ಟೌನ್ ನಿವಾಸಿ ಸುಧಾ ಶಿವಕುಮಾರ್.

ಅಪಾರ ಪ್ರಮಾಣದಲ್ಲಿ ಹರಿಯುತ್ತಿರುವ ನೀರಿನ ಪ್ರವಾಹದಿಂದಾಗಿ ಅಂಬೇಡ್ಕರ್ ಕಾಲೋನಿ, ಗುಂಡುರಾವ್ ಶೆಡ್ ಮತ್ತು ಸುಣ್ಣದ ಹಳ್ಳಿ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ.

ಈ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿ ಅವರಿಗೆ ಅಗತ್ಯವಿರುವ ತುರ್ತು ಕ್ರಮಗಳನ್ನು ತಕ್ಷಣ ಕೈಗೊಳ್ಳಲಾಗುವುದು ಎಂದು ಭದ್ರಾವತಿ ತಹಶೀಲ್ದಾರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+