ಟೀಂ ಅಣ್ಣಾ ಶಾಂತಿ ಭೂಷಣ್ ಮೇಲೆ ಪೊಲೀಸರ ಕಣ್ಣು

ವೋಟಿಗಾಗಿ ನೋಟು ಪ್ರಕರಣಕ್ಕೆ ಸಂಬಧಿಸಿದಂತೆ ಆರೋಪಿಯಾಗಿರುವ ಯಸಂಸದ ಅಮರ್ ಸಿಂಗ್ ಹಾಗೂ ಮುಲಾಯಂ ಸಿಂಗ್ ಅವರ ಮಧ್ಯೆ ಶಾಂತಿ ಭೂಷಣ್ ನಡೆದ ಮಾತುಕತೆ ಸಿಡಿ ನೈಜವಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಸಂಸದ ಅಮರ್ ಸಿಂಗ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಮಾತನಾಡಿದ ಶಾಂತಿಭೂಷಣ್, ಪರವಾಗಿ ತೀರ್ಪು ನೀಡಲು ನ್ಯಾಯಾಧೀಶರಿಗೆ ನಾಲ್ಕು ಕೋಟಿ ರೂಪಾಯಿಗಳ ಲಂಚ ನೀಡಬೇಕಾಗುತ್ತದೆ ಎನ್ನುವ ಧ್ವನಿಯನ್ನು ಹೊಂದಿರುವ ಸಿಡಿ ಪೊಲೀಸರಿಗೆ ಅನಾಮಧೇಯ ವ್ಯಕ್ತಿಗಳಿಂದ ತಲುಪಿತ್ತು.
ಚಂಡೀಗಢ್‌ನ ಫೋರೆನ್ಸಿಕ್ ಲ್ಯಾಬ್ ಸಿಡಿ ತಿರುಚಲಾಗಿದೆ ಎಂದಿದೆ. ಆದರೆ, ದೆಹಲಿ ಮತ್ತು ಹೈದ್ರಾಬಾದ್‌ನಲ್ಲಿರುವ ಫೋರೆನ್ಸಿಕ್ ಲ್ಯಾಬ್‌ಗಳು ಸಿಡಿ ಅಸಲಿ ಎಂದು ವರದಿ ನೀಡಿದೆ. ಸಿಡಿ ತಿರುಚಲಾಗಿದೆ ಎಂದು ಶಾಂತಿ ಭೂಷಣ್ ಅವರ ಮಗ ಪ್ರಶಾಂತ್ ಭೂಷಣ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿ ನೂತನ ಲೋಕಪಾಲ ಕರಡು ರಚನೆ ಮಾಡಿರುವ ಪ್ರಶಾಂತ್ ಭೂಷಣ್ ಮತ್ತು ಶಾಂತಿ ಭೂಷಣ್ ಅವರ ಮೇಲೆ ಸರ್ಕಾರ ನಡೆಸಿರುವ ತಂತ್ರಗಾರಿಕೆ ಇದಾಗಿದೆ ಎಂದು ಅಣ್ಣಾ ಬೆಂಬಲಿಗರು ಅಭಿಪ್ತಾಯಪಟ್ಟಿದ್ದಾರೆ.
ಇದೊಂದು ರಾಜಕೀಯ ಪ್ರೇರಿತ ತಂತ್ರ, ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಪೊಲೀಸರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು. ಸಿಡಿ ಅಸಲಿಯೋ ಅಥವಾ ನಕಲಿಯೋ ಎನ್ನುವ ಬಗ್ಗೆ ಸ್ವತಂತ್ರವಾಗಿ ತನಿಖೆ ನಡೆಸಲು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಶಾಂತಿ ಭೂಷಣ್ ಪ್ರತಿಕ್ರಿಯಿಸಿದ್ದಾರೆ. ಶಾಂತಿ ಭೂಷಣ್ ಮಾತನಾಡಿ, ಸಿಡಿ ಅಸಲಿಯೋ ಅಥವಾ ನಕಲಿಯೋ ಎನ್ನುವ ಬಗ್ಗೆ ಸ್ವತಂತ್ರವಾಗಿ ತನಿಖೆ ನಡೆಸಲು ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗುವುದು.
;











Click it and Unblock the Notifications