ಸದಾನಂದ ಗೌಡರಿಗೆ ಜಯದೇವದಲ್ಲಿ ಹಾರ್ಟ್ ಚೆಕ್ ಅಪ್

ಸಿಎಂ ಆದಾಗಿನಿಂದ ಒಂದು ಹೊತ್ತು ಪುರುಸೊತ್ತಿಲ್ಲದಂತೆ ರಾಜ್ಯದ ವಿವಿಧೆಡೆ ಪ್ರವಾಸ ಮಾಡುತ್ತಿರುವ ಸದಾನಂದ ಗೌಡರನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಮೆಟ್ರೋ ಜಾಲಿರೈಡ್ ಬೇರೆ ಮಾಡಿ ಸಕತ್ ಖುಷಿಯಲ್ಲಿದ್ದ ಸದಾನಂದರು ನಗು ನಗುತ್ತಲೇ ಪರೀಕ್ಷೆ ತಮ್ಮ ದೇಹವನ್ನು ಒಡ್ಡಿದರು.
ರಕ್ತ ಪರೀಕ್ಷೆ, ECHO, ಇಸಿಜಿ, ಎದೆ ಎಕ್ಸ್ ರೆ, ಟ್ರೆಡ್ ಮಿಲ್ ಪರೀಕ್ಷೆ, ಕಿಬ್ಬೊಟ್ಟೆ ಅಲ್ಟ್ರಾಸೌಂಡ್ ಸೇರಿದಂತೆ ಅನೇಕ ಪರೀಕ್ಷೆಗಳನ್ನು ನಡೆಸಿ ಕೂಲಂಕುಷವಾಗಿ ಪರಿಶೀಲಿಸಲಾಯಿತು ಎಂದು ಜಯದೇವ ಸಂಸ್ಥೆ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಹೇಳಿದ್ದಾರೆ.
ಇದು ಕಡ್ಡಾಯ ಪರೀಕ್ಷೆಯಾಗಿದ್ದು, ಯಾವುದೇ ತುರ್ತು ಆರೋಗ್ಯ ಸಮಸ್ಯೆ ಅವರಲ್ಲಿ ಕಾಣಿಸಿಲ್ಲ. ಸಿಎಂ ಆರೋಗ್ಯವಾಗಿದ್ದು, ಯಾವುದೇ ಹೃದ್ರೋಗ ಕಾಯಿಲೆಯ ಲಕ್ಷಣಗಳು ಕಂಡು ಬಂದಿಲ್ಲ. ಆತಂಕಕ್ಕೆ ಕಾರಣವಿಲ್ಲ ಎಂದು ಪರೀಕ್ಷಾ ವರದಿಗಳಿಂದ ತಿಳಿದು ಬಂದಿದೆ ಎಂದು ಡಾ. ಮಂಜುನಾಥ್ ಹೇಳಿದರು.
ಜಯದೇವ ಆಸ್ಪತ್ರೆಯಲ್ಲಿ ಎರಡು ಗಂಟೆಗಳ ಕಾಲ ಚಿಕಿತ್ಸೆ, ಪರೀಕ್ಷೆ ಮುಗಿದ ನಂತ ಕರ್ನಾಟಕ ಮಧುಮೇಹ ಸಂಸ್ಥೆ(KID)ಗೆ ಭೇಟಿ ನೀಡಿ ಬ್ಲಡ್ ಶುಗರ್ ಪರೀಕ್ಷೆ ಮಾಡಿಸಿಕೊಂಡರು. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರಂತೆ ಸದಾನಂದ ಗೌಡರು ಕೂಡಾ ಮಧುಮೇಹ ರೋಗದಿಂದ ಬಳಲುತ್ತಿದ್ದಾರೆ.












Click it and Unblock the Notifications