ಕೈಕೊಟ್ಟ ಹೆಂಡ್ತಿ ಮನೆಯವರು: ಐವರ ಹತ್ಯೆ ಮಾಡಿದ ಇಂಜಿನಿಯರ್

rajasthan-engineer-shoots-down-wife-self
ಜೈಪುರ, ಆಗಸ್ಟ್ 29‌: ಕೈಹಿಡಿದ ಹೆಂಡತಿ ತನ್ನ ತವರಿನ ಜತೆ ಸೇರಿ ಮೋಸ ಮಾಡಿದ್ದಾಳೆ. ಅನಗತ್ಯವಾಗಿ ತನ್ನ ವಿರುದ್ಧ ಕೋರ್ಟ್ ಕೋಸ್ ಗಳನ್ನು ಹಾಕಿಸುತ್ತಿದ್ದಾಳೆ ಎಂದು ಹತಾಶಗೊಂಡ ಪತಿರಾಯ ಮೊದಲು ತನ್ನ ಹೆಂಡತಿಯನ್ನು, ನಂತರ ಆಕೆಯ ಮೂವರು ಬಂಧುಗಳನ್ನು ಕೊನೆಗೆ ಹೈಡ್ರಾಮಾ ಬಳಿಕ ಸ್ವಯಂ ಗುಂಡು ಹಾರಿಸಿಕೊಂಡು ಎಂಜಿನಿಯರ್ ಮಹಾಶಯನೊಬ್ಬ ಸಾವನ್ನಪ್ಪಿದ್ದಾನೆ.

32 ವರ್ಷದ ಪ್ರದೀಪ್ ಜೈನ್ ಭಾನುವಾರ ಬೆಳಗ್ಗೆ 9 ಗಂಟೆಯಲ್ಲಿ ಎರಡು ಪಿಸ್ತೂಲುಗಳೊಂದಿಗೆ ಹತ್ಯಾಕಾಂಡ ನಡೆಸಿದ್ದಾನೆ. ರಾಜಸ್ಥಾನದ ಟೋಂಕ್ ಜಿಲ್ಲೆಯ ದೇವಳಿ ಪಟ್ಟಣದಲ್ಲಿ ಈ ಭೀಕರ ಘಟನೆ ನಡೆದಿದೆ.

ಹೆಂಡತಿ ಯಾಕೆ ಪ್ರಾಣ ತಿನ್ನುತಿ ಎಂದು ಪತ್ನಿ ಸುಮನಾಳ ಮನೆಗೆ ನುಗ್ಗಿದ ಪ್ರದೀಪ ಮೊದಲು ಪತ್ನಿಗೆ ಗುಂಡಿಟ್ಟು ನೇರವಾಗಿ ಅವಳನ್ನು ಇಹಲೋಕಕ್ಕೆ ಕಳಿಸಿದ. ಬಳಿಕ ಅಲ್ಲೇ ಇದ್ದ ಅವಳ ಮೂವರು ಬಂಧುಗಳಿಗೂ ಗುಂಡಿಟ್ಟು ಪರಲೋಕಕ್ಕೆ ಕಳಿಸಿದ. ಅಂದರೆ ಬಾವಮೈದುನರಾದ ಸಂಜಯ್, ಲೋಕೇಶ್ ಮತ್ತು ಲೋಕೇಶ್ ಹೆಂಡತಿ ಅಂಕಿತಾ ಸಹ ಪ್ರಾಣ ತೆತ್ತರು.

ನಾಲ್ವರನ್ನು ಹತ್ಯೆ ಮಾಡಿದ ಬಳಿಕ ಪ್ರದೀಪ್ ಸಮೀಪದಲ್ಲಿಯೇ ಇದ್ದ ತನ್ನ ಸೋದರಿಯ ಮನೆಗೆ ಬಂದ. ಮನೆಯ ಮಹಡಿಯೇರಿ ಕುಳಿತು ಮಾಧ್ಯಮದವರು ಮತ್ತು ಪೊಲೀಸರಿಗೆ ಸುದ್ದಿ ಮುಟ್ಟಿಸಿದ. ಸುಮಾರು 2 ಸಾವಿರ ಮಂದಿ ಮನೆಯೆದುರು ಜಮಾಯಿಸಿದರು.

ಮಹಡಿಯೇರಿದ್ದ ಪ್ರದೀಪ 2 ಗಂಟೆ ಕಾಲ ತನ್ನ ಹೆಂಡತಿ ಮನೆಯವರ ವಿರುದ್ಧ ವಾಚಾಮಗೋಚರ ಬೈದಾಡಿದ. ಪೊಲೀಸರು ಅವನನ್ನು ಹಿಡಿಯಲು ಪ್ರಯತ್ನಿಸಿದರಾದರೂ ಪಿಸ್ತೂಲಿನಿಂದ ಗುಂಡುಹಾರಿಸಿಕೊಂಡು ಸಾಯುವುದಾಗಿ ಬೆದರಿಸುತ್ತಿದ್ದ.

ಇಂಥಾ ಹೆಂಡ್ತಿ ಸಹವಾಸ ಸಾಕು ಎಂದು ಡೈವೋರ್ಸಿಗೆ ಅರ್ಜಿ ಹಾಕಿದ್ದೆ. ನನ್ನ ನಾಲ್ಕು ವರ್ಷದ ಮಗನನ್ನು ನನ್ನ ಸುಪರ್ದಿಗೆ ನಿಡಬೇಕು ಎಂದು ಮನವಿ ಮಾಡಿದ್ದೆ. ಈ ಮಧ್ಯೆ, ಹೆಂಡ್ತಿ ಮನೆಯವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ಪ್ರಕರಣಗಳನ್ನು ದಾಖಲಿಸಿದರು.

ಇದೆಲ್ಲದರಿಂದ ಬೇಸರಗೊಂಡು ಅವರಿಗೆ ತಕ್ಕ ಪಾಠ ಕಲಿಸಲು ಈ ಹತ್ಯೆಗಳನ್ನು ಮಾಡಿದೆ ಎಂದು ಹೇಳಿದ ಪ್ರದೀಪ, ಪಿಸ್ತೂಲಿನಿಂದ ಹಣೆಗೆ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ. ಕೋಟಾದಲ್ಲಿರುವ ರಸಗೊಬ್ಬರ ಕಂಪನಿಯೊಂದರಲ್ಲಿ ಪ್ರದೀಪ ಉನ್ನತ ಹುದ್ದೆಯಲ್ಲಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+