ಕುಮಾರಸ್ವಾಮಿ ದಂಪತಿ ಇನ್ ಡಬಲ್ ಟ್ರಬಲ್

Kumaraswamy couple to appear before Lokayukta court
ಬೆಂಗಳೂರು ಆ.29: ಅಕ್ರಮ ಗಣಿ ಲೈಸೆ ನ್ಸ್ ಮತ್ತು ಖಾಸಗಿ ಗೃಹ ನಿರ್ಮಾಣ ಸಂಸ್ಥೆಗೆ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ದಂಪತಿ ಸಲ್ಲಿಸಿದ ಅರ್ಜಿ ವಿಚಾರಣೆ ಸೋಮವಾರ ನಡೆಯಿತು. ಸುಮಾರು ಒಂದು ತಾಸಿನ ವಿಚಾರಣೆ ನಂತರ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರಕ್ಕೆ ( ಆ. 30) ಮುಂದೂಡಿತು.

ಈ ಪ್ರಕರಣದಲ್ಲಿ ವಿಚಾರಣೆಗೆ ತಡೆಕೋರಿ ಎಚ್ ಡಿ ಕುಮಾರಸ್ವಾಮಿ ಅವರು ಅರ್ಜಿ ಸಲ್ಲಿಸಿದ್ದರು. ಜಂತಕಲ್ ಮೈನಿಂಗ್ ಗುತ್ತಿಗೆ ಹಾಗೂ ವಿಶ್ವಭಾರತಿ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ನಿವೇಶನ ಹಂಚಿಕೆಯಲ್ಲಿ ಆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಹೈಕೋರ್ಟ್ ಆದೇಶ ನೀಡಿತ್ತು.

ವಿಶ್ವಭಾರತಿ ಗೃಹ ನಿರ್ಮಾಣ ಸಂಘಕ್ಕೆ ಅಕ್ರಮವಾಗಿ ಜಮೀನು ಮಂಜೂರು ಮಾಡಿದ್ದರು. ಇದಕ್ಕೆ ಪ್ರತಿಫಲವಾಗಿ ಪತ್ನಿ ಅನಿತಾ ಕುಮಾರಸ್ವಾಮಿ ಬನಶಂಕರಿಯ 3ನೆ ಹಂತದಲ್ಲಿ ಸುಮಾರು 9 ಕೋಟಿ ರು ಬೆಲೆಯ ವಸತಿ ನಿವೇಶನವನ್ನು ಕೇವಲ 1.63 ಲಕ್ಷಕ್ಕೆ ಗಿಫ್ಟ್ ಆಗಿ ಪಡೆದಿದ್ದರು ಎನ್ನುವುದು ಆರೋಪ.

ಲೋಕಾಯುಕ್ತ ಕೋರ್ಟ್ : ಶಿವಮೊಗ್ಗದ ವಕೀಲರಾದ ವಿನೋದ್ ಸಲ್ಲಿಸಿದ್ದ ಖಾಸಗಿ ದೂರಿನ ಅನ್ವಯ ಸಮನ್ಸ್ ಪಡೆದಿರುವ ಎಚ್ ಡಿ ಕುಮಾರಸ್ವಾಮಿ ಅವರು ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಸಮೇತ ಆ.30 ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಹೇಳಿದ್ದಾರೆ.

ಆ.25ರಂದು ನಡೆಯಬೇಕಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಆ.30ಕ್ಕೆ ನ್ಯಾಯಮೂರ್ತಿ ಎನ್.ಕೆ ಸುಧೀಂದ್ರ ರಾವ್ ಅವರು ಮುಂದೂಡಿದ್ದರು.

ಭೂಕಬಳಿಕೆ ವ್ಯಾಜ್ಯ ಪ್ರಕರಣದ ವಿಚಾರಣೆ ನಿಮಿತ್ತ ಸೋಮವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿವಿಲ್ ಕೋರ್ಟ್ ಆವರಣಕ್ಕೆ ಕಾಲಿಟ್ಟರು. ನಾಳೆ ಮತ್ತೊಬ್ಬ ಮಾಜಿ ಸಿಎಂ ನ್ಯಾಯಾಲಯದ ಕಟ್ಟೆ ಹತ್ತಲಿದ್ದಾರೆ. ಅಂತೂ ಇಬ್ಬರೂ ಪೈಪೋಟಿಗೆ ಬಿದ್ದಂತೆ ಕೇಸ್ ಮೇಲೆ ಕೇಸುಗಳನ್ನುಎದುರಿಸುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+