ಕಟ್ಟಾ ಸುಬ್ರಹ್ಮಣ್ಯಗೆ ರಕ್ತ ಭೇದಿ, ಶೀಘ್ರವೇ ಕುತ್ತಿಗೆಗೆ ಆಪರೇಷನ್

ಜತೆಗೆ ಕಟ್ಟಾಗೆ ಕುತ್ತಿಗೆ ನೋವು ತೀವ್ರವಾಗಿ ಬಾಧಿಸುತ್ತಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸದ್ಯದಲ್ಲೇ ಚಿಕಿತ್ಸೆ ನೀಡಲಾಗುವ ಜರೂರತ್ತು ಇದೆ ಎಂದು ಆಸ್ಪತ್ರೆ ಅಧೀಕ್ಷಕ ಬಿಜಿ ತಿಲಕ್ ತಿಳಿಸಿದ್ದಾರೆ.
ಕೆಐಎಡಿಬಿ ಭೂಹಗರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯನಾಯ್ಡು ಅನಾರೋಗ್ಯದ ಕಾರಣ ಒಡ್ಡಿ ವಿಕ್ಟೋರಿಯಾ ಆಸ್ಪತ್ರೆಗೆ ಕಳೆದ ವಾರ ದಾಖಲಾಗಿದ್ದರು.
ಕೆಐಎಡಿಬಿ ಭೂಗರಣದಲ್ಲಿ ಜೈಲು ಸೇರಿದ್ದ ಕಟ್ಟಾಸುಬ್ರಹ್ಮಣ್ಯನಾಯ್ಡು ಸುಮಾರು ಎರಡು ವಾರ ಕಂಬಿ ಹಿಂದೆ ಕಳೆದಿದ್ದರು. ಅವರ ಮಗ ಜಗದೀಶ್ ಕಟ್ಟಾ ಎಂದಿನಂತೆ ಪರಪ್ಪನ ಅಗ್ರಹಾರ ಸೆರೆಮನೆಯಲ್ಲಿ ರಾಗಿ ಬೀಸುತ್ತಿದ್ದಾರೆ.












Click it and Unblock the Notifications