ಲೋಕಾಯುಕ್ತರ ನೇಮಕ ವಿರೋಧಿಸಿದ ನರೆಂದ್ರ ಮೋದಿ

ಮೋದಿ ಸರಕಾರದ ವಿರುದ್ಧ ರೂ. 1 ಲಕ್ಷ ಕೋಟಿ ಮೊತ್ತದ ಬೃಹತ್ ಭ್ರಷ್ಟಾಚಾರದ ಹಗರಣಗಳ ಆರೋಪವನ್ನು ಕಾಂಗ್ರೆಸ್ ಹೊರಿಸಿದೆ. ಇಂತಹ ಸಂದರ್ಭ ರಾಜ್ಯದಲ್ಲಿ ನೂತನ ಲೋಕಾಯುಕ್ತರನ್ನು ನೇಮಕ ಗೊಳಿಸಿರುವುದು ಗಮನಾರ್ಹ ವಿಷಯವಾಗಿದೆ. ಜತೆಗೆ, ಅಣ್ಣಾ ಹಜಾರೆ ಉಪವಾಸ ವ್ರತ ಬೆಂಬಲಿಸುತ್ತಿರುವ ಬಿಜೆಪಿ ಪಕ್ಷವು ತಾನು ಅಧಿಕಾರದಲ್ಲಿರುವ ಗುಜರಾತ್‌ನಲ್ಲೇ ಲೋಕಾಯುಕ್ತ ನೇಮಕ ಮಾಡದಿರುವುದು ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಲೋಕಾಯಯುಕ್ತರಾಗಿ 2003ರಲ್ಲಿ ನ್ಯಾಯಮೂರ್ತಿ ಎಸ್‌ಎಂ ಸೋನಿ ಅವರ ಅಧಿಕಾರಾವಧಿ ಮುಗಿದ ಬಳಿಕ, ಏಳು ವರ್ಷಗಳಿಂದ ಗುಜರಾತ್‌ನಲ್ಲಿ ಲೋಕಾಯುಕ್ತರ ಸ್ಥಾನ ಖಾಲಿಯಾಗಿತ್ತು. ರಾಜ್ಯ ಸರಕಾರವು ಇದಕ್ಕೂ ಮೊದಲು ನ್ಯಾಯಮೂರ್ತಿ ಎಸ್‌ಡಿ ದವೆ ಹೆಸರನ್ನು ಲೋಕಾಯುಕ್ತ ಹುದ್ದೆಗೆ ನಿರಾಕರಿಸಿತ್ತು.
ಆದಾಗ್ಯೂ, ಇದೀಗ ನೂತನ ರಾಜ್ಯಪಾಲರ ನೇಮಕಾತಿಯನ್ನು ಪ್ರಶ್ನಿಸಿ ಮುಖ್ಯಮಂತ್ರಿ ನರೇಂದ್ರ ಮೋದಿ, ಗುಜರಾತ್ ಹೈಕೋರ್ಟ್ ಮೆಟ್ಟಿಲೇರಲಿದ್ದಾರೆ ಎಂಬುದಾಗಿ ವರದಿಯೊಂದು ತಿಳಿಸಿದೆ. ಮೆಹ್ತಾರನ್ನು ಆಯ್ಕೆ ಮಾಡುವುದಕ್ಕೆ ಸಂಬಂಧಿಸಿ ಸುತ್ತೋಲೆಯನ್ನು ಜಾರಿಗೊಳಿಸಲು ರಾಜ್ಯಪಾಲೆ ಲೋಕಾಯುಕ್ತ ಕಾಯ್ದೆಯನ್ವಯ ತನ್ನ ವಿಶೇಷಾಧಿಕಾರವನ್ನು ಬಳಸಿಕೊಂಡಿದ್ದಾರೆ.
ವಿಷಯಕ್ಕೆ ಸಂಬಂಧಿಸಿ ಚರ್ಚೆಗೆ ವಿರೋಧ ಪಕ್ಷ ಮುಂದೆ ಬರುತ್ತಿಲ್ಲ ಎಂದು ಗುಜರಾತ್‌ನ ಆಡಳಿತ ಪಕ್ಷ ಆಪಾದಿಸಿದ್ದರೆ, ಲೋಕಾಯುಕ್ತರ ನೇಮಕದಲ್ಲಿ ಸರಕಾರಕ್ಕೆ ಯಾವುದೇ ಕೆಲಸವಿಲ್ಲ. ಅವರನ್ನು ರಾಜ್ಯಪಾಲರು, ಮುಖ್ಯ ನ್ಯಾಯಮೂರ್ತಿಗಳು ಅಥವಾ ವಿರೋಧ ಪಕ್ಷದ ನಾಯಕರು ನೇಮಕ ಮಾಡುತ್ತಾರೆ ಎಂದು ವಿರೋಧ ಪಕ್ಷ ಹೇಳಿಕೊಂಡಿತ್ತು.












Click it and Unblock the Notifications